ಶ್ರೀ ವಿದ್ಯಾನಿಧಿ ತೀರ್ಥರ 360ನೇ ಆರಾಧಾನಾ ಮಹೋತ್ಸವ

ವಿಜಯಪುರ,ಏ.2:ಜಿಲ್ಲೆಯ ತಾಳಿಕೋಟೆ ಹತ್ತಿರ ಇರುವ ಬಿಳೆಭಾವಿ ಗ್ರಾಮದಲ್ಲಿ ಶ್ರೀ ವಿದ್ಯಾನಿಧಿ ತೀರ್ಥರ 360ನೇ ಆರಾಧಾನಾ ಮಹೋತ್ಸವದ ಅಂಗವಾಗಿ ವಿಜಯಪುರ ಬ್ರಾಹ್ಮಣ ಮಹಿಳಾ ಮಂಡಳಿಯ ವತಿಯಿಂದ ಕೋಲಾಟ, ನೃತ್ಯ ಪ್ರದರ್ಶನ ಅತ್ಯುತ್ತಮವಾಗಿ ನಡೆಯಿತು.
ನೃತ್ಯ ಸಂಗೀತದಲ್ಲಿ ಸವಿತಾ ಗಲಗಲಿ, ಚೈತ್ರಾ ಗೊರಟೇಕರ್, ಜಯಶ್ರೀ ಕನ್ನೂರ, ರಾಧಾ ಕುಲಕರ್ಣಿ, ಕೀರ್ತಿ ಕುಲಕರ್ಣಿ, ಸುರೇಖಾ ಕುಲಕರ್ಣಿ, ಪ್ರವೀಣಾ ಕಣಬೂರ, ವಂದನಾ ನಾಯಕ, ರೇಣುಕಾ ಮುರಾರ್ಕಾನಿ, ತುಳಸಾ ಕುಲಕರ್ಣಿ, ವಿದ್ಯಾ ನಾಡಗೌಡ, ಸವಿತಾ ಕುಲಕರ್ಣಿ, ಜಯಶ್ರೀ ಕುಲಕರ್ಣಿ (ಪಂಚಮುಖಿ) ಈ ಎಲ್ಲ ಸದಸ್ಯರು ಕೋಲಾಟದಲ್ಲಿ ಪಾಲ್ಗೊಂಡು ತಮ್ಮ ನೃತ್ಯ ಪ್ರದರ್ಶನ ನೀಡಿದ್ದಾರೆ.