ಶ್ರೀ ವಿದ್ಯಾನಿಧಿ ತೀರ್ಥರ 160ನೇ ಆರಾಧನಾ ಮಹೋತ್ಸವ

ತಾಳಿಕೋಟೆ:ಮಾ.30: ಹುಣಶಿಹೊಳೆಯ ಕಣ್ವಮಠದ ಪೀಠಾಧಿಕಾರಿಗಳಾದ ಶ್ರೀಶ್ರೀಶ್ರೀ 1008 ಶ್ರೀ ವಿದ್ಯಾ ಕಣ್ವವಿರಾಜ ತೀರ್ಥ ಶ್ರೀ ಪಾದಂಗಳವರ ದಿವ್ಯ ಸಾನಿದ್ಯದಲ್ಲಿ ಶ್ರೀಮನ್ ಮಾಧವತೀರ್ಥ ಮೂಲ ಮಹಾ ಸಂಸ್ಥಾನಮ್ ಶ್ರೀಮತ್ ಕಣ್ವಮಠ(ವೀರಘಟ್ಟ) ಮಹಾ ಸಂಸ್ಥಾನ ಹುಣಸಿಹೊಳೆ ಇವರ ಪರಂಪರೆಯಲ್ಲಿ 4ನೇ ಪೀಠಸ್ಥರಾದ ಶ್ರೀ ವಿಧ್ಯಾನಿಧಿ ತೀರ್ಥರ 160ನೇ ಆರಾಧನಾ ಮಹೋತ್ಸವವು ತಾಲೂಕಿನ ಬಿಳೇಭಾವಿ ಗ್ರಾಮದಲ್ಲಿ ಇಂದು ಮಾರ್ಚ 30 ರಿಂದ ಏಪ್ರೀಲ್ 1ರವರೆಗೆ ಜರುಗಲಿದೆ.
ಶ್ರೀಮತ್ ಕಣ್ವಮಠದ 2ನೇ ಹಾಗೂ 4ನೇ ಯತಿಗಳಾದ ಶ್ರೀ ಅಕ್ಷೋಭ್ಯತೀರ್ಥರು ಹಾಗೂ ಶ್ರೀ ವಿದ್ಯಾನಿಧಿ ತೀರ್ಥರ ವೃಂದಾವನಗಳು ತಾಳಿಕೋಟೆ ತಾಲೂಕಿನ ಬಿಳೇಭಾವಿ ಗ್ರಾಮದಲ್ಲಿದ್ದು ಶ್ರೀ ವಿದ್ಯಾನಿಧಿ ತೀರ್ಥರ ಆರಾಧನಾ ಕಾರ್ಯಕ್ರಮಗಳು ಮಾರ್ಚ 30 ರಿಂದ ಏಪ್ರೀಲ್ 1 ರವರೆಗೆ 3 ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ.
ಮಾರ್ಚ 30 ಶನಿವಾರರಂದು ಪೂರ್ವಾರಾಧನೆ ನಿಮಿತ್ಯ ಬೆಳಿಗ್ಗೆ 5 ಗಂಟೆಗೆ ಸುಪ್ರಭಾತ ಧರ್ಮ ದ್ವಜಾರೋಹಣ ವೇದಘೋಷ ಯತಿಗಳ ವೃಂದಾವನಗಳಿಗೆ ಅಭಿಷೇಕ ಅಲಂಕಾರ, ತೀರ್ಥ ಪ್ರಸಾದ ಹಾಗೂ ಮಂಗಳಾರತಿ ಜರುಗುವದು.
ಮಾರ್ಚ 31 ರವಿವಾರರಂದು ಮಧ್ಯಾರಾಧನೆ ನಿಮಿತ್ಯ ಸುಪ್ರಭಾತ, ವೇದಘೋಷ, ವೃಂದಾವನಗಳಿಗೆ ಅಭಿಷೇಕ ಅಲಂಕಾರ, ಲಕ್ಷ ಪುಷ್ಪಾರ್ಚನೆ, ಶ್ರೀಮತಿ ಅನುಪಮಾ ಅಂಬಾದಾಸ ಜೋಶಿ ಇವರಿಂದ ದಾಸವಾಣಿ ಕಾರ್ಯಕ್ರಮ ನಂತರ ಧರ್ಮಾಚರಣೆ ಕುರಿತು ಶ್ರೀ ನೀಲಕಂಠರಾವ್ ತಲೇಖಾನ ಇವರಿಂದ ಅನಿಸಿಕೆ, ಶ್ರೀ ಶುಕ್ಲ ಯಜುರ್ವೇದ ಪರಂಪರೆಯ ಶ್ರೀಮತ್ ಕಣ್ವಮಠದ ಪೀಠಾಧಿಪತಿಗಳಾದ ಶ್ರೀಶ್ರೀಶ್ರೀ 1008 ಶ್ರೀ ವಿದ್ಯಾಕಣ್ವ ವಿರಾಜತೀರ್ಥರಿಂದ ಸಂಸ್ಥಾನಪೂಜೆ, ಶ್ರೀಗಳಿಂದ ಅನುಗ್ರಹ ಸಂದೇಶ, ಮಹಾ ಮಂಗಳಾರತಿ ತೀರ್ಥ ಪ್ರಸಾದ ಜರುಗಲಿದೆ ಅಲ್ಲದೇ ತಾಳಿಕೋಟೆಯ ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿ, ಶ್ರೀ ಗಾಯತ್ರಿ ಭಜನಾ ಮಂಡಳಿ ಇವರಿಂದ ನಾಮ ಸಂಕೀರ್ತನೆ, ಮಹಾ ಮಂಗಳಾರತಿ ಜರುಗಲಿದೆ.
ಏಪ್ರೀಲ್ 1 ಸೋಮವಾರ ಉತ್ತರಾರಾಧನೆ ನಿಮಿತ್ಯವಾಗಿ ಸುಪ್ರಭಾತ, ವೇದಘೋಷ, ವೃಂದಾವನಗಳಿಗೆ ಅಭಿಷೇಕ ಅಲಂಕಾರ, ತೀರ್ಥ ಪ್ರಸಾದ ಜರುಗಲಿದೆ ಎಂದು ಶ್ರೀ ಅಕ್ಷೋಭ್ಯತೀರ್ಥರು ಹಾಗೂ ಶ್ರೀ ವಿದ್ಯಾನಿಧಿ ತೀರ್ಥರ ಸೇವಾ ಸಮಿತಿ ಪ್ರಕಟನೆ ಮೂಲಕ ತಿಳಿಸಿದೆ.