ಶ್ರೀ ವಿದ್ಯಾಕಣ್ವ ವಿರಾಜತೀರ್ಥ ಶ್ರೀಪಾದಂಗಳವರ ದಂಡೋಧಕ ಸ್ನಾನ, ಚಾತುರ್ಮಾಸ್ಯ ಸಂಕಲ್ಪ

ಕಲಬುರಗಿ,ಜು.23:ಸುರಪುರ ತಾಲೂಕಿನ ಹುಣಸಿಹೊಳೆ ಶ್ರೀಮತ್ ಕಣ್ವಮಠ ಮೂಲಮಹಾ ಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ಶ್ರೀ 1008 ಶ್ರೀ ವಿದ್ಯಾಕಣ್ವ ವಿರಾಜತೀರ್ಥ ಶ್ರೀಪಾದಂಗಳವರು ಕೃಷ್ಣಾ ನದಿತೀರ ವೀರಘಟ್ಟದಲ್ಲಿ ದಂಡಕಾಷ್ಟದಲ್ಲಿ ನೆಲೆಸಿದ ದೇವತೆಗಳನ್ನು ಆವಾಹನೆ ಮಾಡಿ ಶ್ರೀಮಠದ ಶಿಷ್ಯರಿಗೆ ಅಭಿಷೇಕವನ್ನು ಪ್ರೋಕ್ಷಣೆ ಮಾಡಿ ಪುನೀತರನ್ನಾಗಿಸಿದರು, ನಂತರ ಶೋಭ ಯಾತ್ರೆಯೊಂದಿಗೆ ಶ್ರೀ ಮಠಕ್ಕೆ ಭವ್ಯ ಮೆರವಣಿಗ, ಭಕ್ತರ ಜಯ ಘೋಷಗಳೊಂದಿಗೆ ಆಗಮಿಸಿದರು.

ಹುಣಸಿಹೊಳೆಯ ಶ್ರೀ ಮಠದಲ್ಲಿ ತೃತೀಯ ಚಾತುರ್ಮಾಸ ಸಂಕಲ್ಪ, ಶ್ರೀ ವಿಠ್ಠಲಕೃಷ್ಣ ದೇವರಿಗೆ ವಿಶೇಷ ಪೂಜೆ ಸಮಸ್ತ ಯತಿಗಳ ಪೂಜೆ, ತಪ್ತಮುದ್ರಾಧಾರಣೆ, ಮಠಾಭಿಮಾನಿಗಳಿಂದ ಪಾದಪೂಜೆ ಆಶೀರ್ವಚನ ನೀಡಿದ ಶ್ರೀ ವಿದ್ಯಾಕಣ್ವವಿರಾಜತೀರ್ಥ ಶ್ರೀಪಾದಂಗಳವರು ಸನಾತನ ಹಿಂದೂ ಧರ್ಮ ತಿಳಿಸಿಕೊಟ್ಟ ಹಾದಿಯಲ್ಲಿ ನಾವೆಲ್ಲರೂ ನಡೆಯೋಣ, ಉತ್ತರಾಯಣ ಪುಣ್ಯ ಸಂಪಾದನೆ ಕಾಲವಾದರೆ ದಕ್ಷಿಣಾಯನ ಪಾಪವಿಮೋಚನೆ ಗೊಳಿಸಲು ಕಾಲ ಚಾತುರ್ಮಾಸ ವ್ರತವನ್ನು ನಿಷ್ಠೆಯಿಂದ ಆಚರಿಸೋಣ ಶಿಷ್ಯರೆಲ್ಲರೂ ಶ್ರೀಮಠದೊಂದಿಗೆ ಸಂಪರ್ಕದಲ್ಲಿದ್ದು ಭಕ್ತಿ ಶಕ್ತಿಯನ್ನು ಸಂಪಾದಿಸೋಣ, ಶ್ರೀ ವಿಠ್ಠಲಕೃಷ್ಣ ಹಾಗೂ ಸಮಸ್ತ ಯತಿವರಣ್ಯರ ಕೃಪೆಗೆ ಪಾತ್ರರಾಗೋಣ ಎಂದರು.

ವೇ. ಮೂ. ಶ್ರೀ ವೆಂಕಟೇಶಾಚಾರ್ಯಾ ಗ್ರಾಮಪುರೋಹಿತರು, ತಾಳಿಕೋಟೆ ಮತ್ತು ವೇ. ಮೂ. ರಂಗನಾಥಾಚಾರ್ಯಾ ಸಲಾಗುಂದಿ ಉಪನ್ಯಾಸ ನೀಡಿದರು. ಟ್ರಸ್ಟನ ಅಧ್ಯಕ್ಷರಾದ ಶ್ರೀ ಮನೋಹರ್ ಮಾಡಗೇರಿ, ದಿವಾನರಾದ ಸುರೇಶ್ ಕುಲಕರ್ಣಿ, ರಂಗನಾಥ್ ಜೋಶಿ ಪ್ರಸನ್ನ ಆಲಂಪಲ್ಲಿ, ರಾಜು ಜೋಷಿ, ವಿಷ್ಣುಪ್ರಕಾಶ್ ಜೋಶಿ, ರಾಘವೇಂದ್ರ ಕೊಡೇಕಲ್, ಪ್ರಲ್ಲಾದ್ ಕನ್ಸಾವಿ, ವಿನುತ ಏಸ್ ಜೋಶಿ ಹಾಗೂ ಟ್ರಸ್ಟನ ಎಲ್ಲಾ ಪದಾಧಿಕಾರಿಗಳು, ಮಹಿಳಾ ಭಜನಾ ಮಂಡಳಿಯ ಸದಸ್ಯರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಮತ್ತು ನೆರೆಯ ರಾಜ್ಯದ ಸಾವಿರಾರು ಭಕ್ತರು ಭಾಗವಹಿಸಿದ್ದರು.