ಶ್ರೀ ವಿಠಲ ರುಕ್ಮಾಯಿ ದೇವರ ಕಾರ್ತಿಕೋತ್ಸವ

ಸಂಜೆವಾಣಿ ವಾರ್ತೆ
ದಾವಣಗೆರೆ.ಜ.೧೪: ನಗರದ ಮಹಾರಾಜಪೇಟೆ ಶ್ರೀ ವಿಠಲ ರುಕುಮಾಯಿ ದೇವಸ್ಥಾನದಲ್ಲಿ ಶ್ರೀ ಭಾವಸಾರ ಕ್ಷತ್ರಿಯ ತರುಣ ಮಂಡಳಿಯ ವತಿಯಿಂದ ಪ್ರತಿ ವರ್ಷದ ಪದ್ದತಿಯಂತೆ ಶ್ರೀ ವಿಠಲ ರುಕುಮಾಯಿ ದೇವರ ಕಾರ್ತಿಕೋತ್ಸವ ವಿಜೃಂಭಣೆಯಿಂದ ಜರುಗಿತು.ದೈವ ಮಂಡಳಿಯ ಅಧ್ಯಕ್ಷರಾದ ರಘು ಮೊಸಳೆ, ಭಜನಾ ಮಂಡಳಿಯ ಅಧ್ಯಕ್ಷರಾ ನಿಂಗಸ್ವಾಮಿ ಕಮಿತ್ತರ್ ಮತ್ತು ತರುಣ ಮಂಡಳಿ ಅಧ್ಯಕ್ಷ ವಿನಾಯಕ್ ಟಿಕಾರೆ ಹಾಗೂ ಇತರೆ ಎಲ್ಲಾ ಅಂಗ ಸಂಸ್ಥೆಗಳ ಮುಖ್ಯಸ್ಥರು ಕಾರ್ತೀಕೋತ್ಸವ ಉದ್ಘಾಟಿಸಿದರು.