
ಸೈದಾಪುರ: ಮೇ.1:ವಾಸವಿ ಮಾತೆಯ ಆತ್ಮಸ್ಥೈರ್ಯ ಅನನ್ಯವಾದುದು, ಮಾನವನ ಮೋಕ್ಷ ಸಾಧನೆಗೆ ಆತ್ಮೋದ್ಧರಕ್ಕೆ ತ್ಯಾಗ ಬಲಿದಾನಗಳೇ ಮಾರ್ಗವೆಂದು ತೋರಿಸಿಕೊಟ್ಟ ಜಗನ್ಮಾತೆ ವಾಸವಿ ದೇವಿಯ ಜೀವನಾದರ್ಶಗಳು ಮಾನವ ಸಮುದಾಯಕ್ಕೆ ಸ್ಪೂರ್ತಿ ಎಂದು ಕರ್ನಾಟಕ ರಾಜ್ಯ ಆರ್ಯ ವೈಶ್ಯ ಮಹಾಸಭ ನಿರ್ದೇಶಕ ರಾಘವೇಂದ್ರ ಬಾದಮಿ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ಶ್ರಿ ವಾಸವಿ ಜಯಂತಿ ಪ್ರಯುಕ್ತ ಬಾದಮಿ ಪರಿವಾರ ಏರ್ಪಡಿಸಿದ ಸಾರ್ವಜನಿಕ ಅನ್ನ ಸಂತರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಲೌಕಿಕ ಜೀವನವನ್ನು ತ್ಯಾಗ ಮಾಡಿ ಅಗ್ನಿ ಪ್ರವೇಶ ಮಾಡುವುದರ ಮೂಲಕ ದೇವತಾ ಸ್ಥಾನಮಾನ ಪಡೆದ ಅವತಾರಿಣಿ ಕನ್ನಿಕಾಪರಮೇಶ್ವರಿ. ಈ ಸಮಾಜದಲ್ಲಿ ಜನಿಸಿದ ನಾವುಗಳು ಧನ್ಯರು . ಪ್ರತಿಯೊಂದು ಜೀವಿಗಳಿಗೆ ಸುಖ, ಶಾಂತಿ, ಸಮೃದ್ಧಿ ದಯಪಾಲಿಸಲೆಂದು ನಾವುಗಳು ಭಕ್ತಿಪೂರ್ವಕವಾಗಿ ಪ್ರಾರ್ಥಿಸೋಣ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಈಶ್ವರಯ್ಯ ಬಾದಮಿ, ಆನಂದ ಮಿರಿಯಾಲ್, ವಿನೋದ, ವೆಂಕಟೇಶ, ಶ್ರೀನಿವಾಸ ಬೈರಂಕೊಂಡಿ, ಸಾಬರೆಡ್ಡಿ, ಮಲ್ಲಿಕಾರ್ಜುನ, ಶಮೀನಾ, ಬಸವಲಿಂಗಮ್ಮ, ಸೌಮ್ಯ, ಪಾರ್ವತಿ, ಕಾವೇರಿ, ಸಂಜನಾ, ರೇಣುಕಾ, ಸುಜಾತ, ಕಾಶಮ್ಮ, ಮರೇಮ್ಮ, ಸೇರಿದಂತೆ ಇತರರಿದ್ದರು.