ಬೀದರ:ಎ.29: ಪ್ರತಿ ವರ್ಷದಂತೆ ಈ ವರ್ಷವು ಕೂಡಾ ಎಪ್ರಿಲ್ 30, ಭಾನುವಾರ ರಂದು ಶ್ರೀ ವಾಸವಿ ಕನ್ಯಕಾ ಪರಮೇಶ್ವರಿ ಜಯಂತೋತ್ಸವ ಆಚರಿಸಲಾಗುತ್ತಿದೆ. ಅಂದು ಬೆಳಿಗ್ಗೆ 6:00 ಗಂಟೆಯಿಂದ ಅಭಿಷೇಕ, 9:00 ಗಂಟೆಗೆ ಕುಂಕುಮಾರ್ಚನೆ, ಪುಷ್ಪಾರ್ಚನೆ ಮತ್ತು ಮಧ್ಯಾಹ್ನ 12:00 ಗಂಟೆಗೆ ತೊಟ್ಟಿಲು ಕಾರ್ಯಕ್ರಮ ನಡೆಯಲಿದೆ. ತದನಂತರ 4:00 ಗಂಟೆಗೆ ಭವ್ಯ ಮೆರವಣಿಗೆ ಕನ್ಯಕಾ ಪರಮೇಶ್ವರಿ ದೇವಸ್ಥಾನದಿಂದ ಬಸವೇಶ್ವರ ವೃತ್ತ, ಮಹಾವೀರ ವೃತ್ತ, ಅಂಬೇಡ್ಕರ್ ವೃತ್ತ, ಕ್ರಾಂತಿ ಗಣೇಶ, ವಿನಾಯಕ್ ವೃತ್ತ, ಮುಖ್ಯ ರಸ್ತೆ, ಚೌಬಾರ, ಮಾರ್ಗವಾಗಿ ಮತ್ತೆ ದೇವಸ್ಥಾನಕ್ಕೆ ತಲುಪಲಾಗುವುದು.
ಪ್ರಯುಕ್ತ ಸಮಸ್ತ ಸಮಾಜ ಬಾಂಧವರು ಈ ಜಯಂತೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಜಯಂತೊತ್ಸವ ಯಶಸ್ವಿಗೊಳಿಸಲು ಸಂಘದ ಅಧ್ಯಕ್ಷರಾದ ಡಿ.ವಿ. ಸಿಂದೋಲ, ಉಪಾಧ್ಯಕ್ಷರಾದ ದಿಗಂಬರ ಪೋಲಾ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ ಪೆÇಲಾ, ಕಾರ್ಯದರ್ಶಿಗಳಾದ ಚಂದ್ರಶೇಖರ ಗಾದಾ, ವೆಂಕಟೇಶ ಪಿ. ಗಾಧಾ ಹಾಗೂ ಖಜಾಂಚಿಗಳಾದ ಸುನೀಲ, ಅವರು ಜಂಟಿಯಾಗಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.