ಶ್ರೀ ವಾಸವಿ ಕನ್ಯಕಾ ಪರಮೇಶ್ವರಿಯವರ ಜಯಂತೋತ್ಸವ ಭವ್ಯ ಮೆರವಣಿಗೆ

ಬೀದರ:ಮೇ.1: ಪ್ರತಿ ವರ್ಷದಂತೆ ಈ ವರ್ಷವು ಕೂಡಾ ಶ್ರೀ ವಾಸವಿ ಕನ್ಯಕಾ ಪರಮೇಶ್ವರಿ ಜಯಂತೋತ್ಸವ ಆಚರಿಸಲಾಯಿತು.

ಬೆಳಿಗ್ಗೆ 6:00 ಗಂಟೆಯಿಂದ ಅಭಿಷೇಕ, 9:00 ಗಂಟೆಗೆ ಕುಂಕುಮಾರ್ಚನೆ, ಪುಷ್ಪಾರ್ಚನೆ ಮತ್ತು ಮಧ್ಯಾಹ್ನ 12:00 ಗಂಟೆಗೆ ತೊಟ್ಟಿಲು ಕಾರ್ಯಕ್ರಮ ಅತಿ ವಿಜೃಂಭಣೆಯಿಂದ ನಡೆಸಿ ಸಾಯಂಕಾಲ ಭವ್ಯ ಮೆರವಣಿಗೆಯಲ್ಲಿ ಮಹಿಳೆಯರು ಬೆಳ್ಳಗೆ ಕೆಂಪು ಬಣ್ಣದ ಶಿರೆ ಉಟ್ಟಿಕೊಂಡು ತಲೆ ಮೇಲೆ ಕಳ¸ದೊಂದಿಗೆ ಪಾಲ್ಗೊಂಡರು.

ಹೊರ ರಾಜ್ಯದಿಂದ ಬ್ಯಾಂಡ ಹಾಗೂ ಹೆಣ್ಣು ಮಕ್ಕಳು ಕೋಲಾಟ, ಭಜನೆ ಹಾಗೂ ನೃತ್ಯದೊಂದಿಗೆ ಮೇರವಣಿಗೆಯಲ್ಲಿ ಶೋಭೆ ಹೆಚ್ಚಸಿದ್ದರು.

À ಈ ಮೇರವಣಿಗೆ ಕನ್ಯಕಾ ಪರಮೇಶ್ವರಿ ದೇವಸ್ಥಾನದಿಂದ ಬಸವೇಶ್ವರ ವೃತ್ತ, ಮಹಾವೀರ ವೃತ್ತ, ಅಂಬೇಡ್ಕರ್ ವೃತ್ತ, ಕ್ರಾಂತಿ ಗಣೇಶ, ವಿನಾಯಕ್ ವೃತ್ತ, ಮುಖ್ಯ ರಸ್ತೆ, ಚೌಬಾರ, ಮಾರ್ಗವಾಗಿ ಮತ್ತೆ ದೇವಸ್ಥಾನಕ್ಕೆ ತಲುಪಿತು.

ಆರ್ಯ ವೈಶ್ಯ ಸಂಘದ ಪದಾಧಿಕಾರಿಗಳು, ವಾಸವಿ ಮಹಿಳಾ ಮಂಡಳ, ವಾಸವಿ ಯುವತಿ ಸಂಘ, ವಾಸವಿ ಕಿಶೋರ ಸಂಘ, ವಾಸವಿ ಫ್ರೇಂಡ್ಸ್ ಗ್ರೂಪ, ಕನ್ಯಕಾ ಮರಮೇಶ್ವರಿ ಮಿತ್ರ ಮಂಡಳದ ಎಲ್ಲಾ ಪದಾಧಿಕಾರಿಗಳು, ಭಕ್ತಾಧಿಗಳು ಸೇರಿ ಜಯಂತಿಗೆ ಕಳೆ ತಂದುಕೊಟ್ಟರು

ಸಂಘದ ಅಧ್ಯಕ್ಷರಾದ ಡಿ.ವಿ. ಸಿಂದೋಲ, ಉಪಾಧ್ಯಕ್ಷರಾದ ದಿಗಂಬರ ಪೋಲಾ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ ಪೆÇಲಾ, ಕಾರ್ಯದರ್ಶಿಗಳಾದ ಚಂದ್ರಶೇಖರ ಗಾದಾ, ವೆಂಕಟೇಶ ಪಿ. ಗಾಧಾ ಹಾಗೂ ಖಜಾಂಚಿಗಳಾದ ಸುನೀಲ ಸೇರಿಧಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.