ಶ್ರೀ ಲಲಿತಾ ಸಹಸ್ರನಾಮ ಪಾರಾಯಣ


ನವಲಗುಂದ,ಮೇ.19: ನಿತ್ಯವೂ ಲಲಿತಾ ಸಹಸ್ರನಾಮವನ್ನು ಪಠಿಸುವುದರಿಂದ ಮನೆಯ ವಾತಾವರಣ ಶುದ್ಧಿಯಾಗುತ್ತದೆ. ದೇಹದ ನರನಾಡಿಗಳ ಕಾರ್ಯ ಚುರುಕಾಗುತ್ತದೆ. ಶರೀರದ ಸುಪ್ತ ಚೈತನ್ಯವನ್ನು ಜಾಗೃತಗೊಳಿಸುತ್ತದೆ. ಅಪಘಾತವನ್ನು, ಶತ್ರುಗಳಿಂದ ಉಂಟಾಗುವ ತೊಂದರೆಯನ್ನು ನಿವಾರಿಸುವ ಶಕ್ತಿ ಈ ಸಹಸ್ರನಾಮಕ್ಕಿದೆ ಎಂದು ದೇವಸ್ಥಾನದ ಮಹಾಪೆÇೀಷಕರಾದ ಪೆÇ್ರ. ಪರಶುರಾಮ ಎಂ. ಹೊನಕೇರಿ ಹೇಳಿದರು.
ಅವರು ಪಟ್ಟಣದ ಶಿವಶರಣ ಹರಳಯ್ಯ ಸಮಗಾರ ಓಣಿಯ ಶ್ರೀಚಕ್ರ ಧಾರಿಣಿ ಬಳ್ಳಾರಿ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಶ್ರೀ ಲಲಿತಾ ಸಹಸ್ರನಾಮ ಪಾರಾಯಣದೊಂದಿಗೆ ಕುಂಕುಮಾರ್ಚನೆ ಮತ್ತು ಸತ್ಸಂಗ ಕಾರ್ಯಕ್ರಮ ಹಾಗೂ ಪ್ರಸ್ತುತ ದಿನಗಳಲ್ಲಿ ಸತ್ಸಂಗದ ಅವಶ್ಯಕತೆಯ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು
ಸಾನಿಧ್ಯವಹಿಸಿದ್ದ ಶ್ರೀ ಶಾರದೇಶ್ವರಿ ಆಶ್ರಮದ ಅನನ್ಯಮಯಿ ಮಾತಾಜಿ ಮಾತನಾಡಿ ದೇವಿಯ ಸಹಸ್ರನಾಮಗಳನ್ನು ನಿತ್ಯವೂ ಶ್ರದ್ಧೆಯಿಂದ ಪಠಿಸಿದಲ್ಲಿ ಧಾರ್ಮಿಕ ಕ್ಷೇತ್ರಗಳನ್ನು ದರ್ಶನ ಮಾಡಿದರೆ, ಪವಿತ್ರ ನದಿಯಲ್ಲಿ ಸ್ನಾನ ಮಾಡಿದರೆ, ದಾನ-ಧರ್ಮಗಳನ್ನು ಮಾಡಿದ್ದರಿಂದಾಗಿ ಬರುವ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ನುಡಿದರು.
ನಿತ್ಯಜೀವನದಲ್ಲಿ ದೇವಿ ಪಾರಾಯಣ ಪಠಣ ಮತ್ತು ಮಹತ್ವ ಕುರಿತು ರಾಮಚಂದ್ರ ಪವಾರ ಅತಿಥಿ ಉಪನ್ಯಾಸ ನೀಡಿದರು.
ಸರೋಜಾ ಹೋಳಿಯನ್ನವರ, ಹೊನ್ನಪ್ಪ ಹೋನಕೇರಿ ವೇದಿಕೆಯಲ್ಲಿದ್ದರು. ಪೆÇ್ರ. ಮಂಜುನಾಥ ಪಕ್ಕೀರಪ್ಪ ಭಜಂತ್ರಿ ಹಾಗೂ ಪೆÇ್ರ. ತನುಜಾ ಅಶೋಕ ರೋಖಡೆ ಅವರು ಭಕ್ತಿ ಸೇವೆ ಅರ್ಪಿಸಿದರು. ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಭಾಗವಹಿಸಿದ್ದರು.