ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ಬ್ರಹ್ಮ ರಥೋತ್ಸವ

ಆನೇಕಲ್.ಏ.೨೦:ಬಳ್ಳೂರು ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ದ ದೇವಾಲಯವಾದ ಶ್ರೀ ಲಷ್ಮೀ ನಾರಾಯಣಸ್ವಾಮಿ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು ಮತ್ತು ಶ್ರೀ ಬಸವೇಶ್ವರ ಕೃಪಾ ಪೋಷಿತ ನಾಟಕ ಮಂಡಳಿ ವತಿಯಿಂದ ಕುರುಕ್ಷೇತ್ರ ಎಂಬ ಕನ್ನಡ ಪೌರಾಣಿಕ ನಾಟಕ ಆಯೋಜಿಸಲಾಗಿತ್ತು.
ಶ್ರೀ ಲಕ್ಷೀ ನಾರಾಯಣಸ್ವಾಮಿ ಕೋಲಾಟ ತಂಡದವರಿಂದ ಕೋಲಾಟ ಕಾರ್ಯಕ್ರಮ, ಹಲವು ದೇವರುಗಳ ಪಲ್ಲಕ್ಕಿ ಉತ್ಸವ ಮತ್ತು ಸಿಪ್ಕಾಟ್ ರಸ್ತೆಯ ಹಾಗೂ ಓಂ ಶಕ್ತಿ ಬಡಾವಣೆಯ ಅಂಗಡಿ ಮಾಲೀಕರು ಹಾಗೂ ಕಟ್ಟಡ ಮಾಲೀಕರಿಂದ ಆಯೋಜಿಸಿದ್ದ ಕರಗ ಮಹೋತ್ಸವ ಬಳ್ಳೂರು ಗ್ರಾಮಸ್ಥರ ಸಮ್ಮುಖದಲ್ಲಿ ಶ್ರದ್ದಾಭಕ್ತಿಯಿಂದ ನೆರವೇರಿತು.
ಕಾರ್ಯಕ್ರಮದಲ್ಲಿ ಬಳ್ಳೂರು ಗ್ರಾಮಸ್ಥರು, ಭಕ್ತರು ಬಾಗವಹಿಸಿದ್ದರು.