ಶ್ರೀ ರೇಣುಕಾಚಾರ್ಯ ಜಯಂತಿ: ಸನ್ಮಾನ ಸಮಾರಂಭ

ಬಾದಾಮಿ,ಏ6: ಎಲ್ಲ ಸಮಾಜದವರ ಏಳಿಗೆಯನ್ನು ಬಯಸುವ ಜಂಗಮ ಸಮಾಜದವರು ಸಂಸ್ಕøತಿ ಸಂಸ್ಕಾರ, ಆಚಾರ,ವಿಚಾರಗಳನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ಮಾಜಿ ಶಾಸಕ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಹೇಳಿದರು.
ಅವರು ನಗರದ ಅಕ್ಕಮಹಾದೇವಿ ಅನುಭಾವ ಮಂಟಪದ ಶ್ರೀ ಕುಮಾರೇಶ್ವರ ಸಭಾ ಭವನದಲ್ಲಿ ತಾಲೂಕಾ ಜಂಗಮ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ವೀರಶೈವ ಮಹಾಮತ ಸಂಸ್ಥಾಪನಾಚಾರ್ಯ ಆದಿಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿ ಹಾಗೂ ಸ್ಥಳೀಯ ಸಂಸ್ಥೆಗಳ ಸದಸ್ಯರು ಮತ್ತು ಗೌರವಾನ್ವಿತರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ನವಗೃಹ ಹಿರೇಮಠದ ಶಿವಪೂಜಾ ಶಿವಾಚಾರ್ಯ ಸ್ವಾಮಿಜಿ, ನರಸಾಪೂರ ಹಿರೇಮಠದ ಮರುಳಸಿದ್ದ ಶಿವಾಚಾರ್ಯ ಮಹಾಸ್ವಾಮಿಗಳು, ಕೆರೂರ ಚರಂತಿಮಠ ಶಿವಕುಮಾರ ಸ್ವಾಮಿಜಿ, ಗುಳೇದಗುಡ್ಡ ಅಮರೇಶ್ವರ ಮಠದ ನೀಲಕಂಠ ಶಿವಾಚಾರ್ಯ ಸ್ವಾಮೀಜಿಯವರು ಸಾನಿಧ್ಯ ವಹಿಸಿ ಮಾತನಾಡಿದರು. ತಾಲೂಕಾ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷ ಶಿವಕುಮಾರ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ಉದ್ದೇಶಿಸಿ ರಾಜ್ಯ ಪಿಕಾರ್ಡ ಬ್ಯಾಂಕ್ ರಾಜ್ಯ ಉಪಾಧ್ಯಕ್ಷ ಮಹಾಂತೇಶ ಮಮದಾಪೂರ, ಕಾಳಿದಾಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಭೀಮಸೇನ ಚಿಮ್ಮನಕಟ್ಟಿ, ಶ್ರೀ ವೀರಪುಲಿಕೇಶಿ ಸಂಸ್ಥೆಯ ಚೇರಮನ್ ಎ.ಸಿ.ಪಟ್ಟಣದ, ಮಾಜಿ ಜಿ.ಪಂ.ಉಪಾಧ್ಯಕ್ಷ ಹನಮಂತ ಮಾವಿನಮರದ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಶಿಕ್ಷಣ ಸಂಯೋಜಕ ವಿ.ಎಸ್.ಹಿರೇಮಠ ಆದಿಗುರು ರೇಣುಕಾಚಾರ್ಯರ ಜೀವನ ಸಾಧನೆ ಕುರಿತು ಅತಿಥಿ ಉಪನ್ಯಾಸ ನೀಡಿದರು. ವೇದಿಕೆಯ ಮೇಲೆ ಮಾಜಿ ಶಾಸಕ, ಎಂ.ಕೆ.ಪಟ್ಟಣಶೆಟ್ಟಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಶಾಂತಗೌಡ ಪಾಟೀಲ, ತಾಲೂಕಾ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಮುದಕಯ್ಯ ಹಿರೇಮಠ, ಪುರಸಭೆ ಅಧ್ಯಕ್ಷ ಮಂಜುನಾಥ ಹೊಸಮನಿ, ಮಧ್ಯಪಾನ ಸಂಯಮ ಮಂಡಳಿ ಮಾಜಿ ಅಧ್ಯಕ್ಷ ಎಂ.ಬಿ.ಹಂಗರಗಿ, ಕೃಷ್ಣಾ ಕಾಡಾ ಮಾಜಿ ಅಧ್ಯಕ್ಷ ಬಿ.ಪಿ.ಹಳ್ಳೂರ, ಖ್ಯಾತ ವೈದ್ಯ ಡಾ.ಆರ್.ಸಿ.ಭಂಡಾರಿ, ಕೆ.ಓ.ಎಫ್. ನಿರ್ದೇಶಕ ಬಸವರಾಜ ಪಾಟೀಲ, ಡಾ.ಎಂ.ಎಚ್.ಚಲವಾದಿ ಹಾಜರಿದ್ದರು. ಇದೇ ಸಂದರ್ಭದಲ್ಲಿ ವೇದಿಯೆ ಮೇಲೆ ಹಾಜರಿದ್ದ ಗಣ್ಯರನ್ನು ಮತ್ತು ಗ್ರಾ.ಪಂ.ಸದಸ್ಯರನ್ನು ಸನ್ಮಾನಿಸಿ, ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಶಿವು ಹಿರೇಮಠ, ಸುನೀಲ ಕಾರುಡಗಿಮಠ, ಎಂ.ಡಿ.ಯಲಿಗಾರ, ಶರಣಗೌಡ ಪಾಟೀಲ, ಮಹಾಂತೇಶ ಚೌಕಿಮಠ, ಎ.ಪಿ.ಹಿರೇಮಠ, ಹೊನ್ನಯ್ಯ ಹಿರೇಮಠ, ಎಂ.ಎಸ್.ಹಿರೇಮಠ, ಅಮರೇಶ ಯಮನೂರಮಠ, ಶಿವಯ್ಯ ಹಿರೇಮಠ, ದೊಡ್ಡಯ್ಯ ಭೂಸನೂರಮಠ, ವಿ.ಎಸ್.ಪಾರ್ವತಿಮಠ, ಉಮೇಶ ಭಿಕ್ಷಾವತಿಮಠ, ಎಸ್.ಎಂ.ಹಿರೇಮಠ ಸೇರಿದಂತೆ ಸಮಾಜದ ಮುಖಂಡರು ಹಾಜರಿದ್ದರು.