ಶ್ರೀ ರೇಣುಕಾಚಾರ್ಯ ಜಯಂತಿ: ಭವ್ಯ ಮೆರವಣಿಗೆ

ಬಾಗಲಕೋಟೆ: ಮಾ27:ವೀರಶೈವ ಧರ್ಮ ಸಂಸ್ಥಾಪಕರಾದ ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯರಜಯಂತಿಯ ಪ್ರಯುಕ್ತ ಭಾವಚಿತ್ರದ ಮೇರವಣಿಗೆಗೆ ಬಿಲ್‍ಕೆರೂರಿನ ಬಿಲ್ವಾಶ್ರಮದ ಶ್ರೀ ಷ.ಬ್ರ. ಸಿದ್ಧಲಿಂಗ ಶಿವಾಚಾರ್ಯರರು ಚಾಲನೆಯನ್ನು ನೀಡಿದರು.
ನಂತರ ಮೇರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮರಳಿ ಶ್ರೀ ಬೀಳೂರು ಅಜ್ಜನವರ ಗುಡಿಯಲ್ಲಿ ಸಮಾರೋಪಗೊಂಡಿತು. ಮೇರವಣಿಗೆಗೆ ಚಾಲನೆ ನೀಡಿ ಸಂದೇಶ ನೀಡಿದ ಶ್ರೀಗಳು ಜಗದ್ಗುರು ರೇಣುಕಾಚಾರ್ಯರು ಅಗಸ್ತ್ಯ ಮುನಿಯವರಿಗೆ ಭೋದಿಸಿದ ಸಿದ್ಧಾಂತ ಶಿಖಾಮಣಿಯ ತತ್ವ ಸಿದ್ಧಾಂತವನ್ನು ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಪಾಲಿಸಬೇಕೆಂದರು. ಸಮಾಜದಲ್ಲಿಎಲ್ಲರನ್ನು ಒಂದುಗೂಡಿಸಿ ಸಮಾನತೆಯನ್ನು ಎಲ್ಲರಲ್ಲಿಯೂ ಕಂಡಂತವರು ಶ್ರೀ ರೇಣುಕ ಭಗವತ್ಪಾದರು ಎಂದರು.
ಮೇರವಣಿಗೆಯಲ್ಲಿ ಅಖೀಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರಾದ ಜಿ.ಎನ್.ಪಾಟೀಲ, ಬ.ವಿ.ವಿ.ಸಂಘದ ಕಾರ್ಯದರ್ಶಿಗಳಾದ ಮಹೇಶ ಅಥಣಿ, ಸದಸ್ಯರಾದ ವೀರಣ್ಣ ಹಲಕುರ್ಕಿ, ಪ್ರಭುಸ್ವಾಮಿ ಸರಗಣಾಚಾರಿ, ಗುರುಬಸವ ಸೂಳಿಭಾವಿ, ಎಂ.ಎಂ.ಹಂಡಿ, ಬಾಬಣ್ಣ ನಿಡಗುಂದಿ, ಶಶಿಧರ ಬೆಂಬಳಗಿ, ಮಲ್ಲಿಕಾರ್ಜುನ ಸಾಸನೂರ, ತಾಲೂಕಾ ಜಂಗಮ ಕ್ಷೇಮಾಭೀವೃದ್ಧಿ ಸಂಘದ ಅಧ್ಯಕ್ಷರಾದ ವಿ.ಬಿ.ಚೌಕಿಮಠ, ಬುಡಾ ಅಧ್ಯಕ್ಷರಾದ ಬಸಲಿಂಗಪ್ಪ ನಾವಲಗಿ, ನಗರಸಭೆ ಅಧ್ಯಕ್ಷರಾದ ಜ್ಯೋತಿ ಭಜಂತ್ರಿ, ಸದಸ್ಯರಾದ ಸ್ಮಿತಾ ಪವಾರ, ಶಶಿಕಲಾ ಮಜ್ಜಗಿ,ರಾಜೇಂದ್ರ ಬಳೂಲಮಠ, ಚನ್ನಯ್ಯ ಹಿರೇಮಠ, ಅನಿಲ ಅಕ್ಕಮರಡಿ, ಎ.ಎಸ್.ಪಾವಟೆ, ಬಿ.ಆರ್.ಬೋಳಿಶೆಟ್ಟಿ, ಎಂ.ಎನ್.ಪುರಾಣಿಕ, ಮುರಗಯ್ಯ ನಿಂಬಲಗುಂದಿ, ಬಸವರಾಜ ಹಿರೇಮಠ, ಬಸವರಾಜ ಮುಕ್ಕುಪ್ಪಿ, ಬಸವರಾಜ ಭಗವತಿ, ವಿ.ಜಿ.ಮಠಪತಿ, ಚಂದ್ರಶೇಖರ ಶೆಟ್ಟರ, ಶಂಕ್ರಣ್ಣ ಯಾದವಾಡ, ಸಂಗಣ್ಣ ಶಿರೂರ, ಸಂಜಯ ಪಲ್ಲೇದ, ಚಂದ್ರು ಬ್ಯಾಳಿ, ಬಸವರಾಜ ಪರ್ವತಿಮಠ ಉಪಸ್ಥಿತರಿದ್ದರು.