ಶ್ರೀ ರೇಣುಕಾಚಾರ್ಯರ ದಿವ್ಯಜ್ಯೋತಿಯಾತ್ರೆ ಸಂಚಾರ: ಮಹಾಂತ ಶ್ರೀ ಸಂತಸ

ಆಳಂದ: ಮಾ.2:ವೀರಶೈವ ಲಿಂಗಾಯತ್ ಧರ್ಮಕ್ಕೆ ಅಷ್ಟಾವರಣ, ಪಂಚ ಆಚಾರ್ಯ, ಷಟ್ಸಸ್ಥಲ್, ಯೋಗಾಂಗ ಒಳಗೊಂಡು ಶಾರೀರಿಕ ಮತ್ತು ಮಾನಸಿಕ ಸದೃಢತೆ ಒಳಗೊಂಡ ಸಿದ್ಧಾಂತ ಸೀಖಾಮಣಿ ಮೂಲಕ ಧರ್ಮಮಾರ್ಗ ಬೋಧಿಸಿದ ಜಗದ್ಗುರು ರೇಣುಕಾಚಾರ್ಯರ ತತ್ವಾದರ್ಶಗಳನ್ನು ಅಳವಡಿಸಕೊಳ್ಳಬೇಕು ಎಂದು ಆಳಂದ, ನಂದವಾಡಗಿ, ಜಾಲವಾದಿ ಶ್ರೀ ಮಹಾಂತೇಶ್ವರ ಸಂಸ್ಥಾನ ಹಿರೇಮಠದ ಶ್ರೀ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಇಂದಿಲ್ಲಿ ಹೇಳಿದರು.

ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತ್ಯೋತ್ಸವ ಅಂಗವಾಗಿ ಜಯಂತ್ಯೋತ್ಸವ ಸಮಿತಿ ಹಾಗೂ ಲಿಂ. ಮಾಜಿ ಶಾಸಕ ಚಂದ್ರಶೇಖರ್ ಪಾಟೀಲ್ ರೇವೂರ್ ಫೌಂಡೇಶನ್ ಆಶ್ರಯದಲ್ಲಿ ಹಮ್ಮಿಕೊಂಡ ಜಗದ್ಗುರು ಶ್ರೀ ರೇಣುಕಾಚಾರ್ಯರ ದಿವ್ಯಜ್ಯೋತಿಯಾತ್ರೆಯನ್ನು ಪಟ್ಟಣದಲ್ಲಿ ಆಗಮಿಸಿದ್ದಾಗ ಅವರು ಸಂತಸದಿಂದ ಸ್ವಾಗತಿಸಿ ಪೂಜೆ ನೆರವೇರಿಸಿ ಮಾತನಾಡಿದರು.

ಹಿಂದೆ, ಮಠಗಳಲ್ಲಿ, ರಾಜ್ಯದ ಮೂಲೆಗಳಲಷ್ಟೇ ನಡೆಯುತ್ತಿದ್ದ ರೇಣುಕರ ಜಯಂತಿಯನ್ನು ಸರ್ಕಾರ ಸಾರ್ವತ್ರಿಕವಾಗಿ ಆಚರಣೆಗೆ ಕ್ರಮ ಕೈಗೊಂಡಿದ್ದು ಸರ್ಕಾರಕ್ಕೆ ವೀರಶೈವ ಲಿಂಗಾಯತ ಧರ್ಮೀಯರು ಋಣಿಯಾಗಿದ್ದೇವೆÀ ಎಂದರು.

ಜಗತ್ತಿಗೆ ಸಂತರು ಮಹಾಂತರ ಕೊಡುಗೆ ನೀಡಿದವರಲ್ಲಿ ರೇಣುಕ ಭಗತ್ವಾದರು ಒಬ್ಬರಾಗಿದ್ದಾರೆ. ಹಿಂದೂ ಧರ್ಮದಲ್ಲಿ ಶ್ರೀಕೃಷ್ಣ ಪರಮಾತ್ಮನನು ಅರ್ಜುನಿಗೆ ಭಗ್ವತಗೀತೆ ಬೋಧಿಸಿದಂತೆ. ರೇಣುಕ ಭಗವತ್ವಾದರು ಸಹ ಅಗಸ್ತ್ಯ ಮಹಾಮುನಿಗಳಿಗೆ ಸಾವಿರಾರು ವರ್ಷಗಳ ಹಿಂದೆಯೇ ಸಿದ್ಧಾಂತ ಸೀಖಾಮಣಿ ಬೋಧಿಸಿದ್ದಾರೆ. ಇಂಥÀ ಪುಣ್ಯಪುರುಷರ ಜಯಂತಿ ನಿಮಿತ್ತವಾಗಿ ಕಲಬುರಗಿಯ ಲಿಂ. ಚಂದ್ರಶೇಖರ ಪಾಟೀಲ ರೇವೂರ ಫೌಂಡೇಷನ್‍ನಿಂದ ಜ್ಯೋತಿಯಾತ್ರೆಯ ಮೂಲಕ ವೀರಶೈವ ಧರ್ಮದ ತತ್ವ ಸಿದ್ಧಾಂತ ತತ್ವ ಪ್ರಚಾರ ಕಾರ್ಯ ಎಲ್ಲಡೆ ಹಮ್ಮಿಕೊಂಡಿದ್ದ ಸ್ವಾಗರ್ತಾವಾಗಿದೆ. ಈ ಧರ್ಮದ ತತ್ವಾದರ್ಶಗಳನ್ನು ಸರ್ವರು ಪಾಲಿಸುವಂತ್ತಿದೆ. ಮಹಾನುಭಾವರ ಜ್ಯೋತಿಯು ಸರ್ವರ ಹೃದಯ ಬಾಳಿ ಬೆಳಗಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಶರಣಬಸಪ್ಪಾ ಪಾಟೀಲ, ಪುರಸಭೆ ಮಾಜಿ ಸದಸ್ಯ ಲಿಂಗರಾಜ ಪಾಟೀಲ, ಹಿರಿಯ ವಿರೂಪಾಕ್ಷಯ್ಯಾ ಸ್ವಾಮಿ ಹಳ್ಳಿಸಲಗರ, ಶಿವಲಿಂಗಯ್ಯಾ ಸ್ವಾಮಿ ಹೆಬಳಿ, ಸಂತೋಷ ವಾಲೆ, ಬಾಬುರಾವ್ ಬನಶೆಟ್ಟಿ, ಶರಣು ಬಿ. ಕುಂಬಾರ, ಸತೀಶ ಪಾಟೀಲ ಖಾನಾಪೂರ, ವೈಜನಾಥ ಪಾಟೀಲ ಪಡಸಾವಳಿ, ಮಲ್ಲಿಕಾರ್ಜುನ ಎ. ವಣದೆ, ವಿಜಯಕುಮಾರ ಕುಂಬಾರ, ವಿನಯ ವಣದೆ ಸೇರಿದಂತೆ ತಾಯಂದಿರು, ಮಕ್ಕಳು ಭಾಗವಹಿಸಿದ್ದರು. ನಂತರ ಜ್ಯೋತಿಯಾತ್ರೆ ಸಂಚಾರಕ್ಕೆ ಬೀಳ್ಕೊಡಲಾಯಿತು.