ಶ್ರೀ ರೇಣುಕಾಚಾರ್ಯರ ತತ್ವಗಳು ವಿಶ್ವಕ್ಕೆ ಮಾದರಿ

ಗದಗ,ಮಾ27 : ಧರ್ಮ ಸ್ಥಾಪಕ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಮಾನವೀಯ ಮೌಲ್ಯ ಉಳ್ಳ ತತ್ವಗಳು ವಿಶ್ವಕ್ಕೆ ಮಾದರಿಯಾಗಿವೆ. ಅವುಗಳನ್ನು ಆಚರಣೆಗೆ ತರಬೇಕು ಎಂದು ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ಜಿಲ್ಲೆಯ ನರೇಗಲ್ಲ ಪಟ್ಟಣದ ಶ್ರೀ ರೇಣುಕಾಚಾರ್ಯರ ಹಿರಿಯ ಪ್ರಾಥಮಿಕ ಶಾಲೆಯ ಸಭಾಭವನದಲ್ಲಿ ಶುಕ್ರವಾರ ಜರುಗಿದ ಜಗದ್ಗುರು ರೇಣುಕಾಚಾರ್ಯರ ಜಯಂತ್ಯುತ್ಸವದ ಅಂಗವಾಗಿ ಶ್ರೀ ರೇಣುಕಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಆಶೀವರ್ಚನ ನೀಡಿದರು.
ರೇಣುಕರು ಯಾವುದೇ ಜಾತಿ, ಮಥ ಮಂಥವನ್ನು ನೋಡದೆ ಮಾನವ ಧರ್ಮಕ್ಕೆ ಜಯವಾಗಲಿ. ದರ್ಮದಿಂದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಸಂದೇಶ ನೀಡಿರುವುದು ದೇಶ ಸಮಾಜಕ್ಕೆ ಅವರು ಮರೆಯಲಾರದ ಕೊಡುಗೆ ನೀಡಿದ್ದಾರೆ. ಹಿಂದೂ ಧರ್ಮಕ್ಕೆ ವೀರಶೈವ ಧರ್ಮ ಆಧಾರಸ್ತಂಭವಾಗಿದೆ. ಪ್ರಾಚೀನ ಪರಂಪರೆ ಮಾನವ ಕಲ್ಯಾಣ ಬಯಸುವ ವೀರಶೈವ ಧರ್ಮವನ್ನು ದುರುದ್ದೇಶದಿಂದ ಒಡೆದಾಳಲು ಇತ್ತೀಚಿಗೆ ಕೆಲ ರಾಜಕಾರಣಿಗಳು ಮುಂದಾಗುತ್ತಿದ್ದಾರೆ. ವೀರಶೈವ ಜಾತಿಯಲ್ಲ, ಅದೊಂದು ಪರಿಪೂರ್ಣ ವಿಶ್ವಧರ್ಮವಾಗಿದೆ ಎಂದರು.
ವೀರಶೈವ ಸಂಸ್ಕøತ ಪದ ಲಿಂಗಾಯಿತ, ಲಿಂಗವಂತ ಎಂಬೆಲ್ಲ ಪರ್ಯಾಯ ನಾಮಗಳಿವೆ. 101 ಸ್ಥಲಗಳಾಗಿ ರೇಣುಕರು ಮಹಾತಪಸ್ವಿ ಅಗಸ್ತ್ಯಮುನಿಗೆ ವೀರಶೈವಧರ್ಮದ ತತ್ತ್ವ ಸಿದ್ಧಾಂತ ಮತ್ತು ಆಚರಣೆಗಳನ್ನು ಬೋಧಿಸಿ ಜೀವನ್ಮುಕ್ತಿಯನ್ನು ತಿಳಿಸಿಕೊಟ್ಟಿದ್ದಾರೆ. ಸಿದ್ಧಾಂತಶಿಖಾಮಣಿ ವೀರಶೈವ ಧರ್ಮಗ್ರಂಥ. ವಚನ ಸಾಹಿತ್ಯದಲ್ಲಿ ತತ್ತ್ವ ಸಾರಾಂಶ-ವಿಮರ್ಶೆ ಇದೆ, ಆದರೂ ಇದು ಧರ್ಮಗ್ರಂಥ ಆಗಲು ಸಾಧ್ಯವಿಲ್ಲ. ಡಾಕ್ಟರ್ ಎನಿಸಿಕೊಳ್ಳಲು ಎಂಬಿಬಿಎಸ್ ಅಥವಾ ಪಿಎಚ್ಡಿ ಮಾಡಬೇಕು. ಅಂತೆಯೇ ಧರ್ಮಗ್ರಂಥಗಳಿಗೂ ತನ್ನದೇ ಆದ ಗುಣಧರ್ಮಗಳಿರುತ್ತವೆ ಎಂದರು.
ನಿವೃತ್ತ ಶಿಕ್ಷಕ ಎಂ.ಎಸ್. ಧಡೇಸೂರಮಠ ಮಾತನಾಡಿ, ಲಿಂಗಧರಿಸಿ ಲಿಂಗಪೂಜಿಸಿ ಲಿಂಗವೇ ನಾವಾಗುವ ಮಹತ್ವಪೂರ್ಣಘಟ್ಟವನ್ನು ವೀರಶೈವಧರ್ಮದಲ್ಲಿ ಕಾಣಬಹುದು. ಈ ಧರ್ಮದ ಸಂಸ್ಥಾಪಕರು ಶ್ರೀಜಗದ್ಗುರು ರೇಣುಕಾಚಾರ್ಯರು. ಇಲ್ಲಿಯ ವೈಶಿಷ್ಟ್ಯ ಸ್ತ್ರೀಸಮಾನತೆ ಸೇರಿದಂತೆ ಒಳ್ಳೆಯ ಗುಣಗಳನ್ನು ಅರಿತು ಬ್ರಾಹ್ಮಣ ಕುಲದಲ್ಲಿ ಜನಿಸಿದ ಬಸವಣ್ಣನವರು ವೀರಶೈವ ಧರ್ಮ ಸ್ವೀಕರಿಸಿದರು ಎಂದು ಹೇಳಿದರು.
ಡಾ. ಆರ್.ಕೆ. ಗಚ್ಚಿನಮಠ, ಶರಣಪ್ಪ ಜುಟ್ಲ, ಮುತ್ತಣ್ಣ ಪಲ್ಲೇದ, ಈಶ್ವರ ಬೆಟಗೇರಿ, ಎಸ್.ಎ. ಪಾಟೀಲ, ಮುಖ್ಯಶಿಕ್ಷಕಿ ನಿರ್ಮಲಾ ಹಿರೇಮಠ, ಸ್ನೇಹಾ ಬೆಟಗೇರಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.