ಶ್ರೀ ರಾಮ ಮಂದಿರ ನಿಧಿ ಸಮರ್ಪಣಾ ಮಹಾ ಅಭಿಯಾನ ಕಾರ್ಯಾಲಯ ಉದ್ಘಾಟನೆ.

ಸಂಡೂರು.ಜ.14. ಸಂಡೂರಿನ 11ನೇ ವಾರ್ಡ್‍ನ ಎಲ್ ಬಿ ಕಾಲೋನಿಯಲ್ಲಿ ಶ್ರೀ ರಾಮ ಮಂದಿರ ನಿಧಿ ಸಮರ್ಪಣಾ ಮಹಾ ಅಭಿಯಾನ ಕಾರ್ಯಾಲಯವನ್ನು ಉದ್ಘಾಟಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಪ್ರಚಾರಕ ಶ್ರೀ ಶೈಲ ಜೀಯವರು, ಅಯೋದ್ಯ ಶ್ರೀ ರಾಮ ಮಂದಿರ ನಿರ್ಮಾಣ ಹಂತ ಪ್ರಾರಂಭವಾಗಿದ್ದು ದೇಶದ ಸಾರ್ವಜನಿಕರ ನಿಧಿಯನ್ನು ಸಂಗ್ರಹಿಸಿ ರಾಮ ಮಂದಿರ ನಿರ್ಮಾಣ ಮಾಡಲು ಉದ್ದೇಶಿಸಿರುವ ಹಿನ್ನಲೆಯಲ್ಲಿ ಸಂಡೂರಿನಲ್ಲಿ ದಿನಾಂಕ.17.01.2021ರಂದು ನಿಧಿಯನ್ನು ಸಂಗ್ರಹಿಸುವ ಅಭಿಯಾನವನ್ನು ಪ್ರಾರಂಭಿಸಲಾಗುವುದು ಎಂದರು. ನಿಧಿಯನ್ನು ಸಂಗ್ರಹಿಸಿ ಅಯೋಧ್ಯ ರಾಮ ಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್ ಗೆ ಕಳುಹಿಸಲಾಗುವುದು,. ಕಾರಣ ಸರ್ವರು ರಾಮ ಮಂದಿರದ ನಿರ್ಮಾಣಕ್ಕೆ ಕೈ ಜೋಡಿಸಬೇಕಾದದು ಅಗ್ಯವಿದೆ ಎಂದು ತಿಳಿಸಿದರು.
ಸಾನಿಧ್ಯ ವಹಿಸಿದ್ದ ಸಂಡೂರಿನ ವಿರಕ್ತ ಮಠಾಧೀಶ್ವರರಾದ ಪರಮಪೂಜ್ಯ ಶ್ರೀ ಪ್ರಭುಸ್ವಾಮಿಗಳು ಕಾರ್ಯಾಲಯದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಪ್ರತಿಫಲ ಆಪೇಕ್ಷೆ ಇಲ್ಲದೇ ಸೇವಾ ಭಾವನೆಯಿಂದ ಸೇವೆಗೈದರೆ ಮಾತ್ರ ಆ ವ್ಯಕ್ತಿ ಸಮಾಜದ ಪ್ರಮುಖ ಸ್ಥಾನದಲ್ಲಿರಲು ಸಾಧ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಶಾಂತ್ ಬಸವನಗೌಡ ಪಾಟೀಲ್, ಔದಂಭರ ಭಟ್ಟ, ಮಂಜುನಾಥ ಆಚಾರಿ, ಶ್ರೀನಾಥ ಕಾಳೆ, ಬಣಕಾರ ಬಸವರಾಜ, ಯಡಿಯೂರು ಮಂಜುನಾಥ, ಅರಳಿ ಕುಮಾರಸ್ವಾಮಿ, ಬಸವರಾಜ್ ಸಾಲಿಗೇರ, ಡಾಕ್ಟರ್ ಬ್ರಿಜೇಶ್ ಬಳ್ಳಾರಿ, ಸಂಜೀವ್ ಕುಮಾರ್ ಘೋರ್ಪಡೆ, ಶಶಿಕಾಂತ್, ಕೆ.ಶಶಿಧರ್ ಲಕ್ಷ್ಮೀಪುರ, ವಿಶ್ವನಾಥ ಮತ್ತು ಹಲವಾರು ಗಣ್ಯರು ಉಪಸ್ಥಿತರಿದ್ದರು.