ಶ್ರೀ ರಾಮ ನವಮಿ ಪ್ರಯುಕ್ತ;ಸಾವಿರಾರು ಭಕ್ತಾದಿಗಳ ಮಧ್ಯ ಭವ್ಯ ಮೆರವಣಿಗೆ

ಬಸವಕಲ್ಯಾಣ:ಎ.1: ಶ್ರೀ ರಾಮ ನವಮಿ ಮಹೋತ್ಸವದ ನಿಮಿತ್ತ ಗುರುವಾರ ಶ್ರೀ ರಾಮ ನವಮಿ ಉತ್ಸವ ಸಮಿತಿಯಿಂದ ಆಯೋಜಿಸಲಾಗಿದ್ದ ಭವ್ಯ ಶೋಭಾಯಾತ್ರೆ ಕಾಳಿಗಲ್ಲಿ ಯಲ್ಲಿಯ ಶ್ರೀ ಬಾಲಾಜಿ ಮಂದಿರದಿಂದ ಆರಂಭವಾಗಿ ಶ್ರೀ ಹನುಮಾನ ಮಂದಿರ, ಶ್ರೀ ಬಸವೇಶ್ವರ ದೇವಸ್ಥಾನ, ಗಾಂ ವೃತ್ತ, ಬಸವ ವೃತ್ತದ ಮೂಲಕ ಸದಾನಂದ ಮಠದ ಮುಂಭಾಗದಲ್ಲಿರುವ ಶ್ರೀ ಬಾಲಾಜಿ ಮಂದಿರದ ವರೆಗೆ ನಡೆಯಿತು.
ಅಲಂಕೃತ ವಾಹನದಲ್ಲಿ 14 ಅಡಿ ಎತ್ತರದ ಶ್ರೀ ರಾಮನ ಮೂರ್ತಿ ಗಮನ ಸೆಳೆದರೆ, ಮೆರವಣಿಗೆ ಮುಂಭಾಗದಲ್ಲಿ ಅಲಂಕೃತ ವಾಹನಗಳಲ್ಲಿ ಜಗಜ್ಯೋತಿ ಬಸವೇಶ್ವರರ, ಛತ್ರಪತಿ ಶಿವಾಜಿ ಮಹಾರಾಜರ, ಸ್ವಾಮಿ ವಿವೇಕಾನಂದರ, ಜಗದ್ಗುರು ರೇಣುಕಾಚಾರ್ಯರ ಪ್ರತಿಮೆ ಹಾಗೂ ಗೋ ಮಾತೆ ಮೂರ್ತಿಗಳು ಗಮನ ಸೆಳೆದವು. ವಿವಿಧೆಡೆಯಿಂದ ಆಗಮಿಸಿದ ಐದು ಬ್ಯಾಂಜೋ ತಂಡಗಳು ಮಹಿಳಾ ತಂಡ, ಡೋಲ್ ಪತಕ್ ಸೇರಿದಂತೆ ಕಲಾ ತಂಡಗಳ ಪ್ರದರ್ಶನ, ಶಲ್ಯ ಧರಿಸಿ ಹೆಜ್ಜೆ ಹಾಕಿದ ಯುವಕರ ಗುಂಪು ಮೆರವಣಿಗೆ ಮೆರಗು ಹೆಚ್ಚಿಸಿತು.
ಶಾಸಕ ಶರಣು ಸಲಗರ ಮೆರವಣಿಗೆಗೆ ಚಾಲನೆ ನೀಡಿದರು. ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ದೀಪಕ ಮಾಲಗಾರ, ಸಮಿತಿ ಪದಾಕಾರಿಗಳಾದ ಸಂತೋಷ ಸಾಳುಂಕೆ, ರಾಜು ಧನ್ನೂರೆ. ಸಂದೀಪ ಬುಯೆ, ದತ್ತು ಭೆಂಡೆ, ದತ್ತಾತ್ರೇಯ ಘಾಟಬೋರೊಳ, ನಿಲೇಶ ಖೂಬಾ, ಕಿರಣ ಆರ್ಯ, ಅಭಿಜಿತ್ ಮುತ್ತೆ, ಸತೀಶ ತೆಲಂಗ, ಸುನೀಲ ಸಾಳುಂಕೆ, ವಿಠ್ಠಲ ಠಾಕೂರ, ಲಖನದಾಸ ಭೈರಾಗಿ, ಆಕಾಶ ಮುತ್ತೆ, ಚೇೀತನ ಗರ್ಜೆ, ಅಮೂಲ ಆರ್ಯ ಸೇರಿದಂತೆ ಪ್ರಮುಖರು ಇದ್ದರು.
ಮೆರವಣಿಗೆ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ ಮಾಡಲಾಗಿತ್ತು. ಎಎಸ್‍ಪಿ ಶಿವಾಂಶು ರಾಜಪುತ ನಗರಕ್ಕೆ ಆಗಮಿಸಿ ಅವಲೋಕನ ನಡೆಸಿದರು. ಸಿಪಿಐ ರಘುವೀರಶಿಂಗ್ ಠಾಕೂರ, ಪಿಎಸ್‍ಐ ಮಹಾಂತೇಶ ಪಾಟೀಲ್ ಹಾಗೂ ವಿವಿಧ ಠಾಣೆ ಪಿಎಸ್‍ಐಗಳು ಸಿಬ್ಬಂದಿಗಳೊಂದಿಗೆ ಸ್ಥಳದಲ್ಲಿದ್ದು ಮೆರವಣಿಗೆ ಸೂಸುತ್ರವಾಗಿ ನಡೆಯುವಂತೆ ನೋಡಿಕೊಂಡರು..