
ರಾಯಚೂರು,ಏ.೧- ಶ್ರೀ ರಾಮಾಂಜನೇಯ ವೃದ್ಧಾಶ್ರಮದ ೧೫ನೇ ವರ್ಷದ ವಾರ್ಷಿಕೋತ್ಸವ ಮತ್ತು ರಾಮನವಮಿ ಪೂಜೆ ಕಾರ್ಯಕ್ರಮವನ್ನು ಮಾ.೩೦ ರಂದು ಕರ್ನಾಟಕ ನಾಗರಿಕ ಅಭಿವೃದ್ಧಿ ಸಮಿತಿ ವತಿಯಿಂದ ನಗರದಲ್ಲಿ ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು.
ಅಂದು ಸಂಜೆ ೪ ಗಂಟೆಗೆ ರಾಮಾಂಜನೇಯ ದೇವಸ್ಥಾನದಲ್ಲಿ ತೊಟ್ಟಿಲು ಕಾರ್ಯಕ್ರಮ ಹಾಗೂ ಪೂಜೆ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ರಾತ್ರಿ ೮ ಗಂಟೆಯಿಂದ ೧೦ ಗಂಟೆಯವರೆಗೆ ಅನ್ನಸಂಪರ್ಪಣೆಯನ್ನು ಚೆನ್ನಪ್ಪ ಗೌಡ ಸನಬಾಳ ಇವರು ಪ್ರಾರಂಭಿಸಿದರು. ಈ ಕಾರ್ಯಕ್ರಮದಲ್ಲಿ ನೂರಾರು ಭಕ್ತಾದಿಗಳು ಭಾಗವಹಿಸಿದ್ದರು.
ನಂತರ ಶ್ರೀ ರಾಮಾಂಜನೇಯ ಶರಣರ, ಅನಾಥರ ವೃದ್ಧಾಶ್ರಮ ಸಂಸ್ಥಾಪಕ ಎಸ್.ರಾಜು ಮಾತನಾಡಿ, ಕರ್ನಾಟಕ ನಾಗರಿಕ ಅಭಿವೃದ್ಧಿ ಸಮಿತಿ ವತಿಯಿಂದ ಶ್ರೀ ರಾಮಾಂಜನೇಯ ಶರಣರ, ಅನಾಥರ ವೃದ್ಧಾಶ್ರಮವನ್ನು ೧೦- ೧೦ -೨೦೧೦ ರಂದು ಸ್ವಂತ ಕಟ್ಟಡದಲ್ಲಿ ಈ ವೃದ್ಧಾಶ್ರಮವನ್ನು ಕಟ್ಟಲಾಗಿದೆ. ಇದರಲ್ಲಿ ಅತಿ ಕಡು ಬಡವರಿಗೆ ಆಶ್ರಯವನ್ನು ಮಾಡುತ್ತಾ ಬಂದಿದ್ದೇವೆ. ಈ ಸೇವೆಯನ್ನು ಸಾರ್ಥಕ ಸೇವೆ ಎಂದು ಪರಿಗಣಿಸಿ ಅನಾಥ ವೃದ್ಧರ ಪಾಲನೆ,ಘೋಷಣೆ, ಆರೈಕೆಗಳನ್ನು ಮಾಡುತ್ತಾ ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆ ಕೂಡ ಒಳಪಡಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಆರ್.ಡಿ. ಎ ಮಾಜಿ ಅಧ್ಯಕ್ಷ ವೈ.ಗೋಪಾಲರೆಡ್ಡಿ,ಬೊಂಬಾಯಿ ನರಸಪ್ಪ,ನರಸಪ್ಪ ತಾತಾ,ಶಿವಪ್ಪ ತಾತಾ,ಕವು ನರಸಪ್ಪ ತಾತಾ, ಮಾಜಿ ನಗರಸಭೆ ಸದಸ್ಯ ಆರ್. ಚನ್ನಪ್ಪ,ನರಸಿಂಹಲು ಕಟ್ಟಿಮನಿ,ಬಾಬು ಪುಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು ಇದ್ದರು. ದಿಂದ