ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಜೀರ್ಣೋದ್ದಾರ ಟ್ರಸ್ಟ್ ಉದ್ಘಾಟನೆ

ಕಲಬುರಗಿ: ಸೆ.5:ಸಣ್ಣೂರ ಗ್ರಾಮದಲ್ಲಿ ಶ್ರೀ ರಾಮಲಿಂಗೇಶ್ವರದೇವರ ಶ್ರಾವಣ ಮಾಸದ ಮುಕ್ತಾಯ ಸಮಾರಂಭ ಹಾಗೂ ನೂತನ ರಚನೆಯಾದ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಜೀರ್ಣೋದ್ದಾರ ಟ್ರಸ್ಟ್‍ನ್ನು ಮುಗಳನಾಗಾಂವದ ಮ.ಘ.ಚ ಸಿದ್ದಲಿಂಗ ಶಿವಾಚಾರ್ಯಾರು ಹಾಗೂ ಗ್ರಾಮೀಣ ಮತ ಕ್ಷೇತ್ರದ ಶಾಸಕ ಬಸವರಾಜ ಬಿ. ಮತ್ತಿಮಡು ಇವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಲ್ಲಯ್ಯ ಮುತ್ಯಾಕುಸನೂರ, ಶರಣಬಸಪ್ಪ ಪಾಟೀಲ ಅಷ್ಟಗಿ, ಸಂಗಮೇಶ ನಾಗನಹಳ್ಳಿ, ವಿನೋದ ಪಾಟೀಲ ಸರಡಗಿ, ರಾಜಕುಮಾರ ಗಬರಾದಿ, ಬಿ.ಜೆ.ಪಿ ಮುಖಂಡ ಜಗದೀಶ ಪಾಟೀಲ, ಸಣ್ಣೂರಿನ ಗ್ರಾ.ಪಂ. ಅಧ್ಯಕ್ಷೆ ಸುನಿತಾ ಪಾಟೀಲ, ಗ್ರಾ.ಪಂ. ಉಪಾಧ್ಯಕ್ಷ ರಾಜು ಕಲ್ಲಬೆನೂರ, ಪಿ.ಡಿ.ಓ ಸಂದೀಪ ಗುತ್ತೆದಾರ, ಟ್ರಸ್ಟ್‍ನ್ ಅಧ್ಯಕ್ಷ ಶಿವಪುತ್ರಪ್ಪ ಪಾಟೀಲ, ಟ್ರಸ್ಟ್ ಕಾರ್ಯದರ್ಶಿ ಈರಣ್ಣಸಿ ಹಡಪದ ಸಣ್ಣೂರ, ಸಂಗಣ್ಣಗೌಡ ಪೊ. ಪಾಟೀಲ, ರವೀಂದ್ರ ಸೂರಾ, ಬಿ.ಬಿ.ಪಾಟೀಲ, ಮುರಗಯ್ಯ ಸ್ವಾಮಿ, ವೈ.ಬಿ. ಪಾಟೀಲ, ಶರಣಗೌಡ ಪಾಟೀಲ ಪಾಳಾ, ಶಿವಶರಣಪ್ಪ ಸೂರಾ, ಸಂಗಣ್ಣಗೌಡ ಮಾ. ಪಾಟೀಲ, ನಿಂಗಣ್ಣ ಮೇಲಗೇರಿ, ನಾಗೀಂದ್ರಪ್ಪ ರ್ಯಾಕಾ, ಸಿದ್ದು ಖೇಣಿ, ಅಶೋಕ ಮೇಲಗೇರಿ, ಬಸವರಾಜ ವಿಶ್ವಕರ್ಮ, ಮಾಳಪ್ಪ ಪೂಜಾರಿ, ಶೌಕತ ಅಲಿ ಮುತ್ಯಾ, ರಾಮಾ ಹೂಳಗೇರಿ, ಶಿವಮೂರ್ತಿ ಮೇಲಕೆರಿ, ಪ್ರಕಾಶ ತಳಕೇರಿ ಹಾಗೂ ಗ್ರಾಮಸ್ಥರು ಇದ್ದರು.