ಶ್ರೀ ರಾಮನ ಆದರ್ಶಗಳು ಸಾರ್ವಕಾಲಿಕ

ಕಲಬುರಗಿ:ಏ.18: ಪ್ರಶಾಂತ ನಗರದ ಶ್ರೀ ಹನುಮಾನ ಮಂದಿರದಲ್ಲಿ ಶ್ರೀ ರಾಮ ನವಮಿ ಉತ್ಸವವನ್ನು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಅರ್ಚಕರಾದ ಗುಂಡಾಚಾರ್ಯ ನರಿಬೊಳ ಅವರ ನೇತೃತ್ವದಲ್ಲಿ ಪಂಚಾಮೃತ ಅಭಿಷೇಕ, ವಿಶೇಷ ಪೂಜೆ, ಪಾರಾಯಣ, ನಂತರ ಮಹಿಳೆಯರಿಂದ ಭಜನೆ ನೆರವೇರಿತು.
ನಂತರ ಮಧ್ಯಾಹ್ನ 12 ಗಂಟೆಗೆ ಶ್ರೀ ರಾಮದೇವರ ತೊಟ್ಟಿಲ ಉತ್ಸವ ನೆರವೇರಿತು. ಅರ್ಚಕರಾದ ಗುಂಡಾಚಾರ್ಯ ಜೋಶಿ ಅವರು ಮಾತನಾಡಿ ಶ್ರೀ ರಾಮ ದೇವರ ಆದರ್ಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡು ನಡೆದರೆ ಜೀವನದಲ್ಲಿ ಯಾವದೇ ತೊಂದರೆಗಳು ಬರುವದಿಲ್ಲ. ಶ್ರೀ ರಾಮ ದೇವರು ಸಾಕ್ಷಾತ್ ಮಹಾವಿಷ್ಣುವಿನ ಅವತಾರವಾದರು ಸಾಮಾನ್ಯನಂತೆ ಬದುಕಿ ಎಲ್ಲರಿಗೂ ಮಾದರಿಯಾದರು. ದುಷ್ಟರನ್ನು ಶಿಕ್ಷಿಸಿ. ಶಿಷ್ಠರನ್ನು ರಕ್ಷೀಸಿ ರಾಮರಾಜ್ಯ ನಿರ್ಮಾಣ ಮಾಡಿದರು. ಇಂದಿಗೂ ರಾಮರಾಜ್ಯದ ಪರಿಕಲ್ಪನೆ ಎಲ್ಲರೂ ಅಪೇಕ್ಷೆ ಪಡುತ್ತಾರೆ ಎಂದರು.
ಡಿ ವ್ಹಿ ಕುಲಕರ್ಣಿ, ಶಾಮರಾವ ಕುಲಕರ್ಣಿ, ಮಾಧವ ಗುಡಿ, ಗೋಪಾಲರಾವ್ ಸೇರಿದಂತೆ ಅನೇಕ ಮಹಿಳೆಯರು ಭಾಗವಹಿಸಿದ್ದರು.