ಶ್ರೀ ರಾಮಕೃಷ್ಣ ಗುರುಕುಲ ಶಾಲೆ: ಅಂತರ್ಜಾಲ ಮಾಹಿತಿಯ ಉದ್ಘಾಟನೆ

ರಾಯಚೂರು.ಜು.೨೯- ಶ್ರೀ ವಾಸವಿ ಕ್ರಿಯೇಟಿವ್ ಟ್ರಸ್ಟ್ (ರಿ) ರಾಯಚೂರು ಸಂಚಾಲಿತ ಶ್ರೀ ರಾಮಕೃಷ್ಣ ಗುರುಕುಲ ಶಾಲೆಯ ಅಂತರ್ಜಾಲ ಮಾಹಿತಿಯ ವೆಬ್‌ಸೈಟ್ ಕ್ರಿಯೇಟ್ ಮಾಡಿ ಉದ್ಘಾಟಿಸಲಾಯಿತು.
ಕೊಂಡ ಪ್ರಕಾಶ ಅಧ್ಯಕ್ಷರು ಸ್ವಾಗತಿಸುತ್ತ ನಮ್ಮ ಶಾಲೆಯ ಮಾಹಿತಿಯನ್ನು ಜಗಜಾಹಿರ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.
ವಿರೇಶ ಸಿ.ಆರ್.ಪಿ. ಯವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಶ್ರೀ ರಾಮಕೃಷ್ಣ ಗುರುಕುಲ ಶಾಲೆಯ ಶಿಕ್ಷಣದ ವ್ಯವಸ್ಥೆ ಬಗ್ಗೆ ತುಂಬು ಹೃದಯದಿಂದ ಪ್ರಶಂಸಿಸಿದರು. ದೊಡ್ಡ ದೊಡ್ಡ ಸ್ಕೂಲಿನವರೂ ಸಹ ಅಂತರ್ಜಾಲದ ಮುಖಾಂತರ ಮಾಹಿತಿ ನೀಡಲು ಹಿಂಜರಿಯುತ್ತಾರೆ, ಅಂತಹದರಲ್ಲಿ ಈ ಶಾಲೆಯು ಆಡಳಿತ ಮಂಡಳಿ ಮುಂದೆ ಬಂದಿರುವುದು ಅನುಕರಣೀಯವೆಂದರು.
ಮುಂದುವರೆದು ಈ ಶಾಲೆಗೆ ನನ್ನಿಂದಾಗಬಹುದಾದ ಸಹಾಯ ನೀಡುತ್ತೇನೆ ಎಂದರು. ಇನ್ನೊಬ್ಬ ಮುಖ್ಯ ಅತಿಥಿ ಬುಳ್ಳಾಪೂರು ವೆಂಕೋಬ ಇವರು ಶಾಲೆಯ ಬಗ್ಗೆ ಇಲ್ಲಿಯ ಶಿಕ್ಷಕ ವೃಂದದ ಬಗ್ಗೆ ಮಕ್ಕಳನ್ನೂ ತಮ್ಮ ಮಕ್ಕಳೆಂದೇ ಭಾವನೆಯಿಂದ ಅವರಿಗೆ ವಿದ್ಯಾಭ್ಯಾಸದ ಜೊತೆಗೆ ಶಿಸ್ತು, ದೇಶಪ್ರೇಮದ ಬಗ್ಗೆ ಮಕ್ಕಳ ಮನದಾಳದಲ್ಲಿ ಬೆಳೆಯುವಂತೆ ಮಾಡುತ್ತಿದ್ದಾರೆ. ಈ ಶಾಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಆಡಳಿತ ಮಂಡಳಿ ತುಂಬಾ ಸಹಕಾರ ನೀಡುತ್ತಿದ್ದಾರೆ. ಅಂತೆಯೇ ಅಧ್ಯಕ್ಷ, ಕಾರ್ಯದರ್ಶಿ, ಖಜಾಂಚಿ ಮತ್ತು ಆಡಳಿತ ಮಂಡಳಿಯ ಕಾರ್ಯಕರ್ತರು ತುಂಬಾ ಕ್ರಮವಹಿಸುತ್ತಿದ್ದಾರೆ.
ಈ ಶಾಲೆಯ ಅಭಿವೃದ್ಧಿಗಾಗಿ ಸತತ ಪ್ರಯತ್ನಸೀಲರಾಗಿ ಕಾರ್ಯನಿರ್ವಹಿಸುತ್ತಿರುವ ಅಧ್ಯಕ್ಷ ಕೊಂಡ ಪ್ರಕಾಶ, ಕಾರ್ಯದರ್ಶಿ ಮತ್ತು ಇತರ ಆಡಳಿತ ಮಂಡಳಿಯ ಕಾಯ್ಕರ್ತರಿಗೆ ಶುಭಹಾರೈಸಿದರು. ಕೊಂಡ ವೆಂಕಟೇಶ ಕಾರ್ಯದರ್ಶಿಗಳು ಮಾತನಾಡುತ್ತ ಈ ಶಾಲೆಗೆ ಮುಖ್ಯವಾಗಿ ಹುಬ್ಬಳ್ಳಿಯ ಚಿದ್ರೂಪಾನಂದ ಸರಸ್ವತಿಯವರ ಪ್ರೇರಣೆ ಆಶೀರ್ವಾದ ಇದೆ. ಅವರ ಪ್ರೇರಣೆಯಿಂದ ಹಂತ-ಹಂತವಾಗಿ ಶಾಲೆಯಲ್ಲಿ ಶಿಶುವರ್ಗದಿಂದ ಪ್ರೈಮರಿ, ಹೈಯರ್‌ಪ್ರೈಮರಿ ಅಂದರೆ (ಈಗ ಃಚಿbಥಿ siಣಣiಟಿg, ಓuಡಿseಡಿಥಿ, ಐಏಉ, Uಏಉ ಚಿಟಿಜ ೧sಣ Sಣಜ ಣo ೮ಣh Sಣಜ) (ಆಂಗ್ಲ ಮಾಧ್ಯಮದಲ್ಲಿ) ಸರಕಾರದಿಂದ ಮಾನ್ಯತೆ ಪಡೆದಿದ್ದು, ಮುಂದೆ ಹೈಸ್ಕೂಲ್ ಮತ್ತು ಪದವಿವರೆಗೆ ಶಾಲೆ ಪ್ರಾರಂಭಿಸಲು ಆಕಾಂಕ್ಷೆಯಿದೆ.
ಬಡಮಕ್ಕಳಿಗೆ, ಮಧ್ಯಮ ಆದಾಯ ಇರುವ ಪಾಲಕರಿಗೆ ಅತಿ ಕಡಿಮೆ ಫೀ ಯಲ್ಲಿ ಉತ್ತಮ ಶಿಕ್ಷಣ ನೀಡಲು ಬಯಸಿದ್ದೇವೆ. ಈ ಶಾಲೆಯಲ್ಲಿ ಸರಕಾರದ ಪಠ್ಯಕ್ರಮದೊಂದಿಗೆ ಭಗವದ್ಗೀತೆಯನ್ನು ಕಡ್ಡಾಯವಾಗಿ ಕಲಿಸಲಾಗುತ್ತದೆ ಎಂದರು. ಶಿಕ್ಷಕ ಸಿಬ್ಬಂದಿಗೆ ಉಚಿತವಾಗಿ ಪ್ರತೀವರ್ಷ ಸಮವಸ್ತ್ರಗಳ್ನು (ಸಾರಿ) ಉಚಿತವಾಗಿ ವಿತರಿಸಲಾಗುತ್ತದೆ ಎಂದರು.