ಶ್ರೀ ರಾಘವೇಂದ್ರ ಮಠದಲ್ಲಿ ಆರಾಧನಾ ಮಹೋತ್ಸವ

ಲಿಂಗಸುಗೂರ,ಆ.೩೧-
ಪಟ್ಟಣದ ನಂಜನಗೂಡ ಶ್ರೀ ರಾಘವೇಂದ್ರ ಸ್ವಾಮಿಗಳವರ ವಿದ್ಯಾ ಮಠದಲ್ಲಿ ಮಂತ್ರಾಲಯ ಶ್ರೀ ರಾಘವೇಂದ್ರ ಗುರುಸಾರ್ವ ಭೌಮರ ೩೫೨ನೇ ವರ್ಷದ ಆರಾಧನಾ ಮಹೋತ್ಸವ ದಿ ೩೧ ರಿಂದ ದಿ೦೨-೦೯-೨೩ ರವರೆಗೆ ವಿಜ್ರಂಭಣೆಯಿಂದ ಜರುಗಲಿದೆ.
ಭಾರತೀಯ ವೈದಿಕ ಸಿದ್ದಾಂತ ತತ್ವಗಳ ಧರ್ಮ ಪ್ರಚಾರಕ್ಕಾಗಿ ಲೋಕ ಮಾನ್ಯ ಗ್ರಂಥಗಳನ್ನು ರಚಿಸಿ ಮಹದುಪಕಾರ ಮಾಡಿ ದಿನದಲಿತರ ಉದ್ದಾರ ಮಾನವ ಜನಾಂಗದ ಕಲ್ಯಾಣ ಮಾಡುತ್ತ ತಮ್ಮ ಅಖಂಡ ಪುಣ್ಯೆಕಾಶಿಯನ್ನು ಕಾಮಧೇನುವಿನಂತೆ ಧಾರೆಯರುತ್ತಾ ಮಂತ್ರಾಲಯ ಕ್ಷೇತ್ರದಲ್ಲಿ ಶಶಿರವಾಗಿ ಬೃಂದಾವನ ಪ್ರವೇಶ ಮಾಡಿದ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ೩೫೨ ಆರಾಧನಾ ಮಹೋತ್ಸ್ವವನ್ನು ಹಂಸನಾಮ ಪರಮಾತ್ಮನ ಸಾಕ್ಷತ ಪರಂಪರೆಯಾದ ಜಗದಗುರು ಶ್ರೀ ಮನ್ ಮಧ್ವಚಾರ್ಯ ಮೂಲಸಂಸ್ಥಾನಧೀರ್ಶವರಾದ ನಂಜನಗೂಡ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ ಪ್ರಾತ ಸ್ಮರಣೀಯರಾದ ಶ್ರೀ ೧೦೦೮ ಸುಜಿಯಿಂದ್ರ ತಿರ್ಥ ಶ್ರಿಪಾದಂಗಳವರ ಕರಕಮಲ ಸಂಜಾತರಾದ ಪರಮ ಪೂಜ್ಯ ೧೦೦೮ ಸುಶಿಮಿಂದ್ರ ತಿರ್ಥ ಶ್ರಿಪಾದಂಗಳವರ ವರಕುಮಾರರಾದ ಶ್ರೀ ೧೦೦೮ ಸುಯತಿಂದ್ರ ತೀರ್ಥಶ್ರಿಪಾದಂಗಳವರಕುಮಾರರಾದ ಪ್ರಸ್ತುತ ಪೀಠಾಧಿಪತಿಳಾದ ೧೦೦೮ ಶ್ರಿ ಸುಬುಧೇಂದ್ರ ತೀರ್ಥ ಶ್ರಿಪಾದಂಗಳವರಾದ ಶ್ರೀ ಸುಬುದೇಂದ್ರತೀರ್ಥ ಶ್ರಿಪಾದಂಗಳವರ ಅಜ್ಞಾನುಸಾರ ಇದೆ ೩೧ರಿಂದ ೦೨ನೇ ದಿನಾಂಕವರಿಗೆ ಶ್ರೀಗಳ ಆರಾಧನಾ ಮಹೋತ್ಸವ ಜರುಗಲಿದೆ.
ದಿನಾಂಕ ೩೧-೦೮-೨೩ ಗುರುವಾರ ರಂದು ಬೆಳಿಗ್ಗೆ ೫.೩೦ಕ್ಕೆ ಸುಪ್ರಭಾತ೭.೩೦ಕ್ಕೆ ಅಷ್ಟೋತ್ತರ ೮ಗಂಟೆಗೆ ಸಾಮೂಹಿಕ ಸತ್ಯನಾರಾಯಣ ಪೂಜೆ ಸಹಿತ ಪಂಚಾಮೃತ ೧೦.೩೦ಕ್ಕೆ ಪಾದಪೂಜೆಯೊಂದಿಗೆಕನಕಾಭಿಷೇಕ ಅರ್ಚನೆ ೧೨ಕ್ಕೆ ನೇವಿದ್ಯ ಹಸ್ತೋದಕ, ೧೨.೩೦ಕ್ಕೆ ಅಲಂಕಾರ ಬ್ರಾಹ್ಮಣ ಸಂರ್ತಾಪಣೆ ತಿರ್ಥ ಪ್ರಸಾದ ಪಂಡಿತರಿಂದ ಉಪನ್ಯಾಸ . ಸಂಜೆ ೭ಗಂಟೆಗೆ ಗಜವಾಹನೋತ್ಸವ ರಥೋತ್ಸವ ಅಂದಣೋತ್ಸವ ಸ್ವಸ್ತಿ ವಾಚನ ಮಹಾ ಮಂಗಳಾಆರತಿ
ದಿ೦೧-೦೯-೨೩ ಶುಕ್ರವಾರ ರಂದು ಮಧ್ಯಾರಾಧನೆ ಬೆಳಿಗ್ಗೆ ವಿಶೇಷ ೧೦೮ ಲೀಟರ ಕ್ಷೀರಾಭಿಷೇಕ ಮಹಾ ಪಂಚಾಮೃತ ಅಭಿಷೇಕ ರಾಯರಿಗೆ ವಿಶೇಷ ಅಲಂಕಾರ ಸಂಜೆ ೭ಗಂಟೆಗೆ ಹಂಸವಾಹನೋತ್ಸವ ರಥೋತ್ಸವ
ದಿ೦೨-೦೯-೨೩ ಶನಿವಾರ ರಂದು ಉತ್ತರಾರಧನೆ ಬೆಳಿಗ್ಗೆ ೧೧.೩೦ಕ್ಕೆ ಮಹಾರಥೋತ್ಸವ ಸ್ವಸ್ತಿ ವಾಚನ ಸೇವಾ ಕರ್ತರಿಗೆ ಶೇಷ ವಸ್ತ್ರಗಳವಿತರಣೆ
ಎರಡು ದಿನ ಸಂಜೆ ಮಠದ ವ್ಯವಸ್ಥಾಪಕ ಉಡಪಿ ಕೃಷ್ನಾಚಾರ್ಯ ಇವರಿಂದ ಪ್ರವಚನ ಉತ್ಸವಾದಿಗಳು ಜರಗುವದು
ಈ ಮೂರು ದಿನಗಳ ಕಾರ್ಯಕ್ರಮದಲ್ಲಿ ಮಠದ ಸದ್ಬಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀಗುರು ರಾಘವೇಂದ್ರ ದರ್ಶನ ಪಡೆದು ಪುನಿತರಾಗಲು ಮಠದ ವಿಚಾರಣಾಕರ್ತರಾದ ಶ್ಯಾಮ ಸುಂದರ ಮುತಾಲಿಕ ವ್ಯವಸ್ಥಾಪಕ ಉಡಪಿ ಕೃಷ್ನಾಚಾರ್ಯ ಕೊರಿದ್ದಾರೆ.