ಶ್ರೀ ಯುಗ ಪುರುಷ ಹಾನಗಲ್ ಕುಮಾರ ಶಿವಯೋಗಿಗಳ 154ನೇ ಜಯಂತಿ ಕಾರ್ಯಕ್ರಮ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.19: ನಗರದ ಮುಂಡ್ಲೂರು ರಾಮಪ್ಪ ಸಂಭಾಗಣದಲ್ಲಿ ಶ್ರೀ ಯುಗ ಪುರುಷ ಹಾನಗಲ್ ಕುಮಾರ ಶಿವಯೋಗಿಗಳ 154ನೇ ಜಯತಿ ಮತ್ತು ಸಾಧನೆಗೈದ ವಿಕಾಲ ಚೇತನರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಶ್ರೀ ಡಾ|| ಪುಟ್ಟರಾಜ ಗವಾಯಿಗಳ ಸೇವಾ ಸಂಘದಿಂದ ಆಯೋಜಿಸಲಾಗಿತ್ತು.
ಹರಗಿನಡೋಣಿಯ ಷ.ಬ್ರ.ಅಭಿನವ ಸಿದ್ದಲಿಂಗ ಶಿವಚಾರ್ಯ ಸ್ವಾಮಿಗಳು ಯುಗಪುರಷ ಹಾನಗಲ್ ಕುಮಾರ ಶಿವಯೋಗಿಗಳ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತ, ಯುಗಪುರುಷ ಹಾನಗಲ್ ಶಿವಯೋಗಿಗಳು ಪ್ರಾಥಮ್ ಸ್ಮರಣಿಯರು ಅವರನ್ನು ಸ್ಮರಿಸುವುದೇ ಒಂದು ಪುಣ್ಯದ ಕೆಲಸ ಪೂಜ್ಯರು ಮಾಡಿದ ಅಖಿಲ ಭಾರತ ವೀರಶೈವ ಮಹಾಸಭಾ, ಶಿವಯೋಗ ಮಂದಿರ, ಗದುಗಿನ ವಿರೇಶ್ವರ ಪುಣ್ಯಶ್ರಮ, ಸೂರ್ಯ ಚಂದ್ರನಿಗೆ ಸಮವಾಗಿರುವವು. ಸಮಾಜದ ಬಗ್ಗೆ ಅವರಿಗಿದ್ದ ದೂರದೃಷ್ಠಿ ಅವಿಸ್ಮಾರಣೀಯ. ಅವರ ಜಯಂತಿಯ ಜಯಂತಿ ದಿನ ವಿಕಲಾ ಚೇತನರಿಗೆ ಪ್ರತಿಭಾ ಪುರಸ್ಕಾರ ಏರ್ಪಡಿಸಿದ್ದು, ಸಾರ್ಥಕದ ಕೆಲಸ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಂಡ್ರಾಳ್ ಎಂ.ಮೃತ್ಯುಂಜಯ ಸ್ವಾಮಿ ಮಾತನಾಡಿ, ಶ್ರೀ ಕುಮಾರ ಶಿವಯೋಗಿಗಳು ದೃಷ್ಠಿಹೀನರ ಮತ್ತು ಅಂಗವಿಕಲದ ಬದುಕಿಗೆ ಶ್ರೀ ಪಂಚಾಕ್ಷರಿ ಗವಾಯಿಗಳ ಹಾಗೂ ಶ್ರೀ ಪುಟ್ಟರಾಜ ಕವಿ ಗವಾಯಿಗಳ ಮೂಲಕ ಸಂಗೀತ ಕ್ಷೇತ್ರ ನೀಡಿದ ಕೊಡುಗೆ ಬಹಳ ದೊಡ್ಡದು. ಇತಿಹಾಸದಲ್ಲಿ ಯಾರೂ ಕೂಡಾ ರೇಣುಕಾರ್ಯ ಪಂಚಾಚಾರ್ಯರು, ಬಸವಾದಿ ಶಿವಶರಣರು, ಅಂಧ, ಅಂಗವಿಕಲರ ಬಗ್ಗೆ ಚಿಂತಿಸಿರಲಿಲ್ಲ ಆದರೆ ಹಾನಗಲ್ ಕುಮಾರ ಶಿವಯೋಗಿಗಳ ದೂರ ದೃಷ್ಠಿಯಿಂದ ವಿರೇಶ್ವರ ಪುಣ್ಯಶ್ರಮ ಸಂಗೀತದ ಮೂಲಕ ಅವರಿಗೆ ಬದುಕನ್ನು ಕಟ್ಟಿಕೊಳ್ಳಲು ಅವರು ಮಾಡಿದ ಸೇವೆ ಇತಿಹಾಸದಲ್ಲಿ ಅವಿಸ್ಮರಣೀಯವಾಗಿದ್ದು, ಪ್ರತೀ ವರ್ಷ ಅವರ ಜಯಂತಿಯ ದಿನ ಸಂಘದ ವತಿಯಿಂದ ಅಂಗವಿಕಲತೆಯನ್ನು ಮೆಟ್ಟಿ ನಿಂತು ಸಾಧನೆಗೈದ ಸಾಧಕರಿಗೆ ಸನ್ಮಾನಿಸುತ್ತಾ ಬಂದಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ಬಂಗಾರದ ಪದಕ ಪಡೆದ ಬಳ್ಳಾರಿ ನಗರದ ಕುಮಾರಿ ಕವಿತಾ, ಅಂಧರಿಗೆ ವಿಶೇಷವಾಗಿ ಸೇವೆ ಸಲ್ಲಿಸುವ ಗಂಗಣ್ಣ ಸಿರಿವಾರ್, ರಾಜ್ಯ ಮಟ್ಟದ ಸಿಟ್ಟಿಂಗ್ ಕಬ್ಬಡಿಯಲ್ಲಿ ವಿಶೇಷ ಸಾಧನೆ ಮಾಡಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ಕೂಡ್ಲಿಗಿ ತಾಲ್ಲೂಕಿನ ಹಿರೇ ಹೆಗ್ಗಡಿಗಿ ಕೊಡಗಿ ಮಂಜುನಾಥ ಇವರನ್ನು ಮತ್ತು ಜಾವಲಿಂಗ್ ತ್ರೋನಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿ ನೇಪಾಳ್ ಮತ್ತು ಶ್ರೀಲಂಕ ದೇಶದಲ್ಲಿ ಕ್ರೀಡೆಯಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿದ ಕಂಡ್ರಾಳಿ ಶರಣೇಶ್ ರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ ಜಿಲ್ಲೆಯ ಅಂಗವಿಕಲರ ಸಂಘದ ಅಧ್ಯಕ್ಷರಾದ ಕುಮಾರ, ರೈಲ್ವೆ ಕ್ರಿಯಾ ಸಮಿತಿಯ ಹೋರಾಟಗಾರ ಕೆ.ಎಮ್. ಮಹೇಶ್ವರ ಸ್ವಾಮಿ, , ರೈತ ಮುಖಂಡರಾದ ದರೂರು ಪುರುಷೋತ್ತಮಗೌಡ್ರು, ಜೆ.ಎಮ್. ಬಸವರಾಜಸ್ವಾಮಿ, ಗಂಗಾವತಿ ವಿರೇಶ್, ಹೆಚ್.ಕೆ.ಮಲ್ಲಿಕಾರ್ಜುನ ಸ್ವಾಮಿ, ಸುರೇಶ್ ಹೂಗಾರ್ ಮುಂತಾದವರು ಭಾಗವಹಿಸಿದರು.
ಹೆಚ್.ಎಮ್. ಅಮರೇಶ್ ಸ್ವಾಗತಿಸಿದರು. ಕೊಟ್ರೇಶ್ ಕಾರ್ಯಕ್ರಮ ನಿರೂಪಿಸಿದರು.