
ಶ್ರೀರಂಗಪಟ್ಟಣ: ಏ.07:- ಪಶ್ಚಿಮ ವಾಹಿನಿ ಹತ್ತಿರ ಮೈಸೂರು ಬೆಂಗಳೂರು ರಸ್ತೆ ತಿರುವುನಲ್ಲಿರುವ ಪ್ರಸಿದ್ಧ
ಶ್ರೀ ಮೂಲ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ ಮುಂಭಾಗ ಗೋಡೆ ಹೊಡೆದು ಕಳ್ಳತನಕ್ಕೆ ವಿಫಲ ಯತ್ನ ನಡೆಸಿ ರುವ ಘಟನೆ ನಡೆದಿದೆ.
ಮಧ್ಯ ರಾತ್ರಿ ಸುಮಾರು 12 ಗಂಟೆ ಯಲ್ಲಿ ದೇವಸ್ಥಾನ ಪ್ರಮುಖ ಆರ್ಚಕ ಜಯತೀರ್ಥರವರು ಮನೆಯ¯್ಲÉೀ ತನ್ನ ಮೊಬೈಲ್‍ನಲ್ಲಿ ನೋಡುವಾಗ ಸುಮಾರು ನಾಲ್ಕು ಜನ ಯಾರೂ ತಿರುಗಾಡುತ್ತಿದ್ದಂತೆ ಕ್ಯಾಮೆರಾದಲ್ಲಿ ಕಾಣಿಸಿತು. ನಂತರ ಸ್ನೇಹಿ ತರು ಜೊತೆ ಪಟ್ಟಣ ಆರP್ಷÀಕ ಠಾಣೆಗೆ ಬಂದು ಮಾಹಿತಿ ತP್ಷÀಣವೇ ಪೆÇಲೀಸ ರೊಂದಿಗೆ ದೇವಸ್ಥಾನದ ಬಳಿ ಬಂದು ಕಳ್ಳರನ್ನು ಹಿಡಿಯಲು ಯತ್ನಿಸಿದರು.
ಪೆÇಲೀಸರನ್ನು ಕಂಡ ತಕ್ಷಣ ಎಚ್ಚೆತ್ತ ಕಳ್ಳರು ತಕ್ಷಣ ಗೋಡೆ ಹಾರಿ ಪರಾರಿಯಾ ದರು. ಅರ್ಚಕರ ಸಮಯಪ್ರಜ್ಞೆಯಿಂದಾಗಿ ದೇವಸ್ಥಾನದಲ್ಲಿ ಯಾವುದೇ ಕಳ್ಳತನ ನಡೆದಿಲ್ಲ.
ದೇವಸ್ಥಾನದ ಆವರಣದಲ್ಲಿ ಅಳವಡಿ ಸಲಾಗಿರುವ ಸಿಸಿಟಿವಿ ಕ್ಯಾಮೆರಾ ದೃಶ್ಯಗ ಳನ್ನು ಅರ್ಚರು ಪ್ರತಿನಿತ್ಯ ಮಧ್ಯೆ ರಾತ್ರಿ ವೇಳೆಯಲ್ಲಿ ವೀಕ್ಷಿಸುವ ಅಭ್ಯಾಸ ಮಾಡಿ ಕೊಂಡಿದ್ದರು. ಮಧ್ಯರಾತ್ರಿ ಸಮಯದಲ್ಲಿ ಭಗವಂತನೇ ಅರ್ಚಕರನ್ನು ನಿದ್ರೆಯಿಂದ ಎಚ್ಚರಗೊಳಿಸಿರಬಹುದು ಎಂದು ಭಕ್ತಾದಿ ಗಳು ಮಾತನಾಡುತ್ತಿದ್ದುದು ಕಂಡು ಬಂತು.