ಶ್ರೀ ಮುರುಘರಾಜೇಂದ್ರ ಹಿ.ಪ್ರಾ. ಶಾಲೆ ಮುಖ್ಯೋಪಾಧ್ಯಯರಿಗೆ ಬೀಳ್ಕೊಡಿಗೆ

ದಾವಣಗೆರೆ, ಜೂ. 1 – ನಗರದ ಕೊಂಡಜ್ಜಿ ರಸ್ತೆಯ ಶಿಬಾರ ಬಳಿಯ ಶ್ರೀ ಮುರುಘರಾಜೇಂದ್ರ ಹಿರಿಯ ಪ್ರಾಥಮಿಕ ಪಾಠಶಾಲೆಯ ಮುಖ್ಯೋಪಾಧ್ಯಯರಾದ ಆರ್.ಡಿ. ಪ್ರಕಾಶ್ ಅವರು ವಯೋನಿವೃತ್ತಿ ಹೊಂದಿರುವ  ಪ್ರಯುಕ್ತ ಅವರಿಗೆ ಸರಳ ಬೀಳ್ಕೋಡಿಗೆ ಸಮಾರಂಭವನ್ನುಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಶಾಲಾ ಆಡಳಿತ ಮಂಡಳಿಯವರು ಮತ್ತು  ಶಿಕ್ಷಕರು ಮತ್ತು ಶಿಕ್ಷಕೇತರ ವರ್ಗದವರು ಮುಖ್ಯ ಶಿಕ್ಷಕ ಪ್ರಕಾಶ್ ಅವರನ್ನು ಅಭಿನಂದಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ಕೊಟ್ರೇಶ್ಅವರು  ಪ್ರಕಾಶ್ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿ, ಬೀಳ್ಕೊಟ್ಟರು.  
ಶಿಕ್ಷಕರ ಸಂಘದ ಉಪಾಧ್ಯಕ್ಷರು, ಕಾರ್ಯ ದರ್ಶಿಗಳು, ಸದಸ್ಯರುಗಳು ಪ್ರಕಾಶ್ ಅವರಿಗೆ ತಮ್ಮ
ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.