ಶ್ರೀ ಮುದ್ಧಿ ಬಸವೇಶ್ವರ ಸ್ವಾಮಿ ಅಗ್ನಿಹೊಂಡ ಹುಚ್ಚಯ್ಯ ಉತ್ಸವ 


 ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಮೇ.04  ತಾಲೂಕಿನ ಮಾಲವಿ ಗ್ರಾಮದ ಶ್ರೀ ಮುದ್ದಿ ಬಸವೇಶ್ವರ ಸ್ವಾಮಿ ರಥೋತ್ಸವದ ಅಂಗವಾಗಿ ಸಮಾಳ ನಂದಿಕೋಲು ವಿವಿಧ ವಾದ್ಯ ಮೇಳಗಳೊಂದಿಗೆ ಭಕ್ತರ ಜಯ ಘೋಷದೊಂದಿಗೆ  ಹುಚ್ಚಯ್ಯ ಉತ್ಸವ ಅದ್ದೂರಿಯಾಗಿ  ನಡೆಯಿತು.
ಬಳಿಕ ಸಹಸ್ರಾರು ಭಕ್ತರು ಅಗ್ನಿಹೊಂಡ ಆಯುವ ಮೂಲಕ ಭಕ್ತರು ಭಕ್ತಿ ಸಮರ್ಪಿಸಿದರು. ಈ ವೇಳೆ ಶ್ರೀ ಸ್ವಾಮಿ ಗುಡಿ ತುಂಬಿದ ಬಳಿಕ ಗ್ರಾಮದ ಮಠಾಧೀಶರು ಗುರು ಹಿರಿಯರಿಂದ ದೈವಸ್ಥರಿಂದ ವಿಶೇಷ ಪೂಜೆ ಅಭಿಷೇಕ ಗಂಟಾನಾದ ಜಯಘೋಷದದೊಂದಿಗೆ ಪೂಜಾ ಕೈಂ ಕಾರ್ಯಗಳು ವಿಜೃಂಭಣೆಯಿಂದ ಜರುಗಿದವು.ಭಕ್ತರು ಹೂವು ಹಣ್ಣು ಕಾಯಿಯೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪುನೀತರಾದರು. 
ಈ ವೇಳೆ ಚನ್ನಬಸವರಾಜ ಸ್ವಾಮಿ, ಕೊಟ್ರಯ್ಯ ಸ್ವಾಮಿ, ಕೆ.ಎಂ ಅಜ್ಜೇಶ್ವರಯ್ಯ ಸ್ವಾಮಿ, ನೆರೆಗಲ್ಲು ವೀರಣ್ಣ, ಬಣಕಾರ ಬಸವರಾಜ, ಬಣವಿಕಲ್ ಮಲ್ಲಿಕಾರ್ಜುನ,ಕಮ್ಮಾರಮರುಳಸಿದ್ದಪ್ಪ ,ಬಡಿಗೇರ ಬಸವರಾಜ ಬಾರಿಗಿಡ ನಾಗಪ್ಪ, ಅಳವುಂಡಿ ಅಂದಾನಪ್ಪ, ಗಜಾಪುರದ ಸಿದ್ಧಲಿಂಗಪ್ಪ, ದೇವಸ್ಥಾನದ ಅರ್ಚಕ ಆನಂದ ಪೂಜಾರು, ಗ್ರಾ.ಪಂ ಉಪಾಧ್ಯಕ್ಷ ಅಮ್ಮರ್ ಮಂಜುನಾಥ,ಮಾಲವಿ ಗ್ರಾಮದ ದೈವಸ್ಥರು ಗುರು ಹಿರಿಯರು ಸುತ್ತಾ ಮುತ್ತಲಿನ ಗ್ರಾಮಗಳ ನಾಗರಿಕರು ಪಾಲ್ಗೊಂಡಿದ್ದರು.