ಬೀದರ:ಜೂ.16: ನಗರದ ಮಸೂದಿ ಲೇಔಟ್ ನ, ನ್ಯೂ ಆದರ್ಶ ಕಾಲೋನಿಯ ಏಪೆರ್Çೀರ್ಟ್ ರಸ್ತೆಯಲ್ಲಿರುವ ಟ್ಯಾಪ್ ರೂಟ್ ಗ್ರೂಪ್ ಆಫ್ ಕಾಲೇಜಿನ ಶ್ರೀ ಮಾತೆ ಮಾಣಿಕೇಶ್ವರಿ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಪ್ರಸಕ್ತ ಸಾಲಿನ ನೀಟ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಮೋಘ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪೆÇ್ರೀತ್ಸಾಹಿಸಲಾಯಿತು.
ನೀಟ್ ಪರೀಕ್ಷೆಯಲ್ಲಿ 720ಕ್ಕೆ 657 ಅಂಕ ಪಡೆದ ದರ್ಶನ ಬಸವರಾಜ ತಗಾರೆ ಕಾಲೇಜಿಗೆ ಟಾಪರ್ ಆಗಿ ಹೊರಹೊಮ್ಮಿದ್ದಾನೆ. ಉಳಿದಂತೆ ನಂದಿಕಾ ಕುಲಕರ್ಣಿ 575 ಪ್ರಭು ಭಾಲಕೆ 575 ಬೆನ್ನಿ ಡೆನಲ್ ಪೆÇೀಲ್ 516 ಪ್ರೇಕಶಾ ಪ್ರಕಾಶ 511 ಅಂಕಗಳನ್ನು ಪಡೆಯುವ ಮೂಲಕ ನೀಟ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಅವರಿಗೆ ಹೂಗುಚ್ಛ ನೀಡಿ, ಶಾಲು ಹೊದಿಸಿ, ಸಿಹಿ ತಿನಿಸುವ ಮೂಲಕ ಗೌರವಿಸಿ ಪೆÇ್ರೀತ್ಸಾಹಿಸಲಾಯಿತು.
ಉತ್ತಮ ಶೈಕ್ಷಣಿಕ ವಾತಾವರಣ ಉತ್ಕøಷ್ಟ ಗುಣಮಟ್ಟದ ಶಿಕ್ಷಣ ನುರಿತ ಅನುಭವಿ ಸಂಪನ್ಮೂಲ ಉಪನ್ಯಾಸಕರ ಮಾರ್ಗದರ್ಶನ ಹಾಗೂ ವಿದ್ಯಾರ್ಥಿಗಳ ಕಠಿಣ ಪರಿಶ್ರಮದಿಂದಾಗಿ ಪ್ರಸಕ್ತ ಸಾಲಿನ ನೀಟ್ ಪರೀಕ್ಷೆಯಲ್ಲಿ ಕಾಲೇಜಿಗೆ ಉತ್ತಮ ಫಲಿತಾಂಶ ಬಂದಿದೆ. ವಿದ್ಯಾರ್ಥಿಗಳ ಸಾಧನೆ ಸಂತಸ ತಂದಿದೆ ಎಂದು ಕಾಲೇಜಿನ ಶೈಕ್ಷಣಿಕ ನಿರ್ದೇಶಕ ಪೆÇ್ರಫೆಸರ್ ಶ್ರೀಧರ ಎಸ್ ಹೇಳಿದರು.
ಬೀದರ ಜಿಲ್ಲೆಯಲ್ಲಿ ಸಾಕಷ್ಟು ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ. ಅವರಿಗೆ ಸೂಕ್ತ ಮಾರ್ಗದರ್ಶನ ಮತ್ತು ಪೆÇ್ರೀತ್ಸಾಹದ ಅಗತ್ಯವಿದೆ. ಕಾಲೇಜು ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ ಬೆಳೆಸಿ ಸಾಧನೆಗೆ ಪ್ರೇರಣೆ ನೀಡಲಾಗುತ್ತಿದೆ ಎಂದು ಸಹ ನಿರ್ದೇಶಕ ರಘುನಂದ ಎಸ್ ಹೇಳಿದರು.
ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಪ್ರಾಚಾರ್ಯ ಪಿ.ಎಸ್ ಕುಮಾರರೆಡ್ಡಿ
ಲೋಕೇಶ ಉಡಬಾಳೆ ಹಾಗೂ ಸಮಸ್ತ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.