ಶ್ರೀ ಮಾಣಿಕ ಪ್ರಭುಗಳ 155ನೇ ಪುಣ್ಯತಿಥಿ ಆಚರಣೆ

ಹುಮನಾಬಾದ:ಕಲ್ಯಾಣ ಕರ್ನಾಟಕದ ಸುಪ್ರಸಿದ್ಧ ಕ್ಷೇತ್ರ ಸಕಲಮತ ಹರಿಕಾರ, ಭಕ್ತರ ಮನೋಕಾಮನೆಯನ್ನು ಇಂದಿಗೂ ಈಡೇರಿಸಿತ್ತಿರುವ ಶ್ರೀ ಮಾಣಿಕ ಪ್ರಭುಗಳ ಕ್ಷೇತ್ರದಲ್ಲಿ ಶ್ರೀ ಫ್ರಭುಗಳ 155ನೇ ಪುಣ್ಯತಿಥಿಯನ್ನು ಬೆಳಗ್ಗೆ 6 ಗಂಟೆಗೆ ಶ್ರೀ ಪ್ರಭುಗಳಿಗೆ ಕಕ್ಕಡಾರತಿ ಶ್ರೀ ಸಂಸ್ಥಾನದ ಪೀಠಾಧಿಪತಿಗಳು ಭಕ್ತಕಾರ್ಯ ಕಲ್ಪದೃಮ ಜಯಘೋಷದೊಂದಿಗೆ ನೇರವರಿಸಿದರು.

ಇದಾದ ನಂತರ ಸಂಜೀವಿನಿ ಪ್ರಭು ಸಮಾಧಿಗೆ ರಾಜೋಪಚಾರ, ಮಹಾಪುಜಾ, ಮಹಾರುದ್ರಾಭಿಷೇಕ ಮುಂತಾದ ಕಾರ್ಯಗಳು ಪೀಠಾಧಿಪತಿ ಡಾ|| ಶ್ರೀ ಜ್ಞಾನರಾಜ ಮಹಾರಾಜರು ಆಚರಿಸಿದರು. ಸಂಜೆ 5 ಗಂಟೆಗೆ ಶ್ರೀ ಪ್ರಭು ಆರಾಧನೆ ಸೇವೆಗಳು ಜರಿಗಿದವು. ಸಂಜೆ ಪ್ರದೋಷ್ ಪೂಜೆಯ ನಂತರ ಮಹಾಪ್ರಸಾದ ವಿತರಣೆಯಾಯಿತು. ಶ್ರೀ ಆನಂದರಾಜ ಪ್ರಭುಗಳು ಹಾಗು ಚೈತನ್ಯರಾಜ ಪ್ರಭುಗಳು ಸರ್ಕಾರದ ನಿಯಮ ಪಾಲನೆಯಲ್ಲಿ ಭಂಗ ಉಂಟಾಗದಂತೆ ವ್ಯವಸ್ಥೆ ಕಲ್ಪಸಿದ್ದರು. ಬಂದ ಭಕ್ತರಿಗೆಲ್ಲಾ ಮಾಸ್ಕ, ಸಾಮಾಜಿಕ ಅಂತರ ಕಡ್ಡಾಯವಾಗಿತ್ತು