ಶ್ರೀ ಮಾಣಿಕಪ್ರಭು ದತ್ತ ಜಯಂತಿ ಮಹೋತ್ಸವ, ಪ್ರಭುಗಳ ದರ್ಶನ ಪಡೆದ ಭಕ್ತರು

ಹುಮನಾಬಾದ್:ಡಿ.27: ಶ್ರೀ ಮಾಣಿಕಪ್ರಭು ಮಂದಿರದಲ್ಲಿ ಶ್ರೀ ದತ್ತ ಜಯಂತಿ ಮಹೋತ್ಸವ ಹಾಗೂ ಶ್ರೀ ಪ್ರಭು ಮಹಾರಾಜರ 206ನೇ ಜಯಂತಿ ದಿನವಾದ ಮಂಗಳವಾರ ದರ್ಶನಕ್ಕೆ ಜನ ಸಾಗರವೇ ಹರಿದು ಬಂದಿದ್ದು ಕಂಡು ಬಂದಿತು.

ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ತೆಲಂಗಾಣ, ಗೋವಾದಿಂದ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಅನೂಕೂಲವಾಗೆಂದು ಇಂದು ಬೆಳಿಗ್ಗೆ ಕಾಕಡಾರತಿ ನಂತರ 7 ಗಂಟೆಗೆ ಮಹಾರುದ್ರಾಭಿಷೇಕ, ಲಘುನ್ಯಾಸ, ಮಹಾನ್ಯಾಸ, ಸೇವೆಯೊಂದಿಗೆ ಪೀಠಾಧಿಕಾರಿಗಳು ಡಾ. ಜ್ಞಾನರಾಜ ಪ್ರಭುಗಳು ಶ್ರೀ ಪ್ರಭು ಸಂಜೀವಿನಿ ಸಮಾಧಿಗೆ ಮಹಾಪೂಜೆ ಮುಗಿಸಿ ಭಕ್ತರಿಗೆ ಸಂಜೀವಿನಿ ಸಮಾಧಿ ದರ್ಶನಕ್ಕೆ ಅನೂಕೂಲ ಮಾಡಿ ಕೊಡಲಾಗಿತ್ತು. ಮಾಣಿಕನಗರದ ಗ್ರಾಮದ ನಿವಾಸಿಗಳಿಂದ ದೂರದಿಂದ ಬಂದ ಭಕ್ತರಿಗೆ ರೊಟ್ಟಿ ಊಟದ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗಿತ್ತು.

ನಂತರ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಮಾಣಿಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿಯರು, ಅಂಧ ಮಕ್ಕಳ ಶಾಲೆ ರಾಯಚೂರು ಹಾಗೂ ಮಾಣಿಕನಗರದ ವಿದ್ಯಾರ್ಥಿಗಳು, ಸಂಗೀತದ ರುಚಿಯನ್ನು ಉಣ ಬಡಿಸಿದರು. ಆಸೈ ಆನ ಕಲಾವಿದರಾದ ಅಜಯ ಸೂಗಾಂವಕರ್, ಹಾರ್ಮೊನಿಯಂ, ಮತ್ತು ರಾಜುಸಿಂಗ ತಿವಾರಿ ತಬಲಾ ಸಾಥ ನೀಡಿದರು. ಮಧ್ಯರಾತ್ರಿಯಿಂದ ಬೆಳಿಗ್ಗೆ ವರೆಗೆ ಶ್ರೀ ದತ್ತ ಜನ್ಮೋತ್ಸವ ಹಾಗೂ ಪ್ರಭು ಜನ್ಮೋತ್ಸವ ತೊಟ್ಟಿಲೋತ್ಸವದ ನಂತರ ಹದಿನೆಂಡು ತರಹದ ವೇದ, ವ್ಯಾಕರಣ, ಮುಮಾಂಸೆ, ಗಾಯನ, ನೃತ್ಯ, ಮುಂತಾದ ಅಷ್ಠಾವಧಾನ ಸೇವೆ ಮುಗಿಯಲು ಬೆಳಗಿನ ಜಾವವರೆಗೆ ನಡೆಯಲಿವೆ.