ಶ್ರೀ ಮಲ್ಲಿಕಾರ್ಜುನ ದೇವರ 59ನೇ ಜಾತ್ರಾ ಮಹೋತ್ಸವ

ಕಲಬುರಗಿ,ಮಾ.28:ಸ್ಟೇಶನ್ ಬಬಲಾದ ಶ್ರೀಮದ್ ರಂಭಾಪುರಿ ಖಾಸಾ ಶಾಖಾ ಬೃಹನ್ಮಠದ ಲಿಂ.ಸಿದ್ಧಲಿಂಗ ಶಿವಯೋಗಿಗಳ ಸತ್ ಸಂಕಲ್ಪದೊಂದಿಗೆ ಶ್ರೀ ಮಲ್ಲಿಕಾರ್ಜುನ ದೇವರ 59ನೇ ಜಾತ್ರಾ ಮಹೋತ್ಸವ ಮಾರ್ಚ 30 ಗುರುವಾರದಂದು ಜರುಗುವುದು. ಸಂಜೆ 6 ಗಂಟೆಗೆ ರಥೋತ್ಸವ ಜರುಗುವುದು.
ಸೋಮನಾಥ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಬಬಲಾದ ಮಠದ ಶಿವಮೂರ್ತಿ ಶಿವಾಚಾರ್ಯರ ನೇತೃತ್ವದಲ್ಲಿ ಬೆಂಗಳೂರಿನ ಡಾ|| ಎಸ್.ಪಿ. ದಯಾನಂದ ಹಾಗೂ ಲೋಕಸೇವಾ ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಇವರುಗಳು ರಥೋತ್ಸವಕ್ಕೆ ಚಾಲನೆ ನೀಡುವರು. ಹೊನ್ನಕಿರಣಗಿ, ಶ್ರೀನಿವಾಸ ಸರಡಗಿ, ಚವದಾಪುರಿ, ತೊನಸನಹಳ್ಳಿ ಶ್ರೀಗಳು ಪಾಲ್ಗೊಳ್ಳುವರು. ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಮಾಜಿ ಎಂಎಲ್‍ಸಿ ಅಲ್ಲಮಪ್ರಭು ಪಾಟೀಲ, ಕಲಬುರಗಿ ಮೇಯರ್ ವಿಶಾಲ ದರ್ಗೆ, ಶರಣು ಪಪ್ಪಾ, ನೀಲಕಂಠ ಮೂಲಗೆ, ಅಪ್ಪ ಕಣಕಿ, ಸಂತೋಷ ಪಾಟೀಲ ದಣ್ಣೂರ ಮೊದಲಾದ ಗಣ್ಯ ಮಾನ್ಯರು ಪಾಲ್ಗೊಳ್ಳುವರು ಎಂದು ಶ್ರೀ ಮಠದ ಪ್ರಕಟಣೆಯಲ್ಲಿ ತಿಳಿಸಿದೆ.