ಶ್ರೀ ಮಲೈ ಮಹದೇಶ್ವರ ಸ್ವಾಮಿ ಮಹಾ ಸಂಭ್ರಮ

ಆನೇಕಲ್.ಮಾ.೧- ಪಟ್ಟಣದ ಶ್ರೀರಾಮ ಕುಟೀರದ ಆವರಣದಲ್ಲಿ ಶ್ರೀ ಮಲೈ ಮಹದೇಶ್ವರಸ್ವಾಮಿ ವೃದ್ದ ಆಶ್ರಮ ಟ್ರಸ್ಟ್ ವತಿಯಿಂದ ಶ್ರೀ ಮಲೈ ಮಹದೇಶ್ವರ ಸ್ವಾಮಿ ಮಹಾ ಸಂಭ್ರಮವನ್ನು ಆಯೋಜಿಸಲಾಗಿತ್ತು ವಿಶೇಷವಾಗಿ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ, ವೃದ್ದರಿಗೆ ಕಂಬಳಿ ವಿತರಣೆ, ಮಹದೇಶ್ವರ ಸ್ವಾಮಿಗೆ ಪೂಜೆ, ಪಲ್ಲಕ್ಕಿ ಉತ್ಸವ, ಮಳವಳ್ಳಿ ಮಹದೇವಯ್ಯ ಸ್ವಾಮಿಗಳಿಂದ ಭಕ್ತಿ ಗೀತೆಗಳು, ಮನರಂಜನೆ ಹಾಗೂ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು.


ಈ ವೇಳೆ ಶ್ರೀ ಮಲೈ ಮಹದೇಶ್ವರ ಸ್ವಾಮಿ ವೃದ್ದ ಆಶ್ರಮ ಟ್ರಸ್ಟ್ ಅಧ್ಯಕ್ಷ ಟಿ.ಚಂದ್ರಪ್ಪ ಮಾತನಾಡಿ ನೊಂದ ಜೀವಗಳಿಗೆ ಆಸರೆ ಯಾಗಬೇಕು ಅವರಿಗೊಂದು ಪುಟ್ಟ ಆಶ್ರಮ ಕಟ್ಟಿ ಅವರನ್ನು ಸಂತೋಷದಿಂದ ನೋಡಿಕೊಳ್ಳಬೇಕು ಎಂಬುದು ನನ್ನ ಬಹುದಿನದ ಕನಸಾಗಿದ್ದು ಅದರಂತೆ ಕಳೆದ ೨ ವರ್ಷಗಳಿಂದ ಶ್ರೀ ಮಲೈ ಮಹದೇಶ್ವರ ಸ್ವಾಮಿ ವೃದ್ದ ಆಶ್ರಮ ಟ್ರಸ್ಟ್ ಮೂಲಕ ಆಶ್ರಮ ನಿರ್ಮಿಸಿ ತಾನು ದುಡಿದ ಜೊತೆಗೆ ದಾನಿಗಳು ನೀಡಿದ ಹಣದಲ್ಲಿ ಆಶ್ರಮವನ್ನು ನಡೆಸಿಕೊಂಡು ಬರುತ್ತಿದ್ದೇನೆ, ಸಿರಿವಂತರು ಹಾಗೂ ಸರ್ಕಾರ ತಮ್ಮ ಕೈಲಾದ ಮಟ್ಟಿಗೆ ಆಶ್ರಮಕ್ಕೆ ಸಹಾಯ ಮಾಡಿ ಎಂದು ಮನವಿ ಮಾಡಿದರು.
ಕುಂತೂರು ಮಠದ ಅಲ್ಲಮ್ಮ ಶಿವಪ್ರಭು ಸ್ವಾಮೀಜಿಗಳು, ರಾಜಾಪುರ ಮಠದ ಶ್ರೀ ರಾಜೇಶ್ವರ ಶಿವಾಚಾರ್ಯ ಸ್ವಾಮೀಗಳು,ಗುಮ್ಮಳಾಪುರ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳು, ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ವೇದಿಕೆಯ ಉಪಾಧ್ಯಕ್ಷ ಡಾ|| ಲೋಕೇಶ್, ವರ್ತೂರು ಸಂತೋಷ್. ಹಾಸ್ಯ ನಟರು ಮತ್ತು ಸಂಘದ ಪದಾದಿಕಾರಿಗಳು, ಬಾಗವಹಿಸಿದ್ದರು.