ಶ್ರೀ ಮರಡಿ ಸಿದ್ದೇಶ್ವರ ಕರ್ತೃ ಗದ್ದುಗೆಗೆ ವಿಶೇಷ ಪೂಜೆ

ವಿಜಯಪುರ : ಎ.11:ಬಬಲೇಶ್ವರ ತಾಲೂಕಿನ ಕಣಮುಚನಾಳ ಗ್ರಾಮದಲ್ಲಿ ರಾಜ್ಯ ಮಟ್ಟದ ಪಟ್ಟದ ಪೂಜಾರಿಗಳ ಹಾಗೂ ಜಡೆ ತಲೆ ಪೂಜಾರಿಗಳ 4ನೇ ಹಾಲುಮತ ಧರ್ಮ ಸಭೆಯನ್ನು ನಡೆಸಲಾಯಿತು. ಗ್ರಾಮದ ಭಕ್ತರು ಹನುಮಾನ ದೇವಸ್ಥಾನದಿಂದ ದೇವರ ಸತ್ತಿಗೆ ಹಾಗೂ ಎಲ್ಲ ಪೂಜಾರಿಗಳನ್ನು ಡೊಳ್ಳು ಕುಣಿತದೊಂದಿಗೆ ಪ್ರಮುಖ ರಸ್ತೆಗಳ ಮೂಲಕ ಶ್ರೀ ಮರಡಿ ಸಿದ್ದೇಶ್ವರ ದೇವಸ್ಥಾನಕ್ಕೆ ಬರಮಾಡಿಕೊಂಡರು. ಶ್ರೀ ಮರಡಿ ಸಿದ್ದೇಶ್ವರ ಕರ್ತೃ ಗದ್ದುಗೆಗೆ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು.
ಹಾಗೂ ಗ್ರಾಮದ ಹೆಣ್ಣು ಮಕ್ಕಳು ಎಲ್ಲ ಪೂಜಾರಿಗಳಿಗೆ ದಾರಿಯುದ್ದಕ್ಕೂ ಪಾದ ಪೂಜೆ ಮಾಡಿದರು. 4ನೇ ಧರ್ಮ ಸಭೆಯ ಅಧ್ಯಕ್ಷತೆಯನ್ನು ಪಟ್ಟದ ಪೂಜಾರಿಗಳಾದ ಕಲ್ಲಪ್ಪ ನಾಟೀಕಾರ ವಹಿಸಿದ್ದರು. ಧರ್ಮದ ಪೂಜ್ಯನೀಯ ವಸ್ತುಗಳಾದ ಕಂಬಳಿ, ಬೆತ್ತ, ಬಂಡಾರ ಮುಂತಾದವುಗಳನ್ನು ಸೇವಾ ನಿಷ್ಠೆಯಿಂದ ಉಪಯೋಗಿಸಬೇಕು. ಅವುಗಳಿಂದ ಎಲ್ಲ ಪೂಜಾರಿಗಳಿಗೆ ಗುರುವಿನ ಆರ್ಶೀವಾದ ಇದ್ದಂತೆ. ಅವುಗಳಿಂದ ಅನೇಕ ಧರ್ಮ ದೇವತೆಗಳು ಅಗಾಧವಾದ ಪವಾಡಗಳನ್ನು ಮಾಡಿದ್ದಾರೆ ಎಂದು ಸಂಘದ ಅಧ್ಯಕ್ಷರಾದ ಮಾಳಿಂಗರಾಯ ಮಾರಾಯರು ಶಿಕ್ಷಕರು ನಾಗಠಾಣ ಹೇಳಿದರು. ಇನ್ನೋರ್ವ ಪೂಜಾರಿಗಳಾದ ಬನಸಿದ್ದ ಮಾರಾಯರು ಸುಕ್ಷೇತ್ರ ತಿಡಗುಂದಿ ಎಲ್ಲ ಭಕ್ತರ ಮನಸ್ಸನ್ನು ಹಸನು ಮಾಡಲು ಅವರೆಲ್ಲರಿಗೆ ದಿನಾಲು ತಮ್ಮ ಗ್ರಾಮದಲ್ಲಿ ಎಲ್ಲ ಜಾತಿ ಭಕ್ತರೊಂದಿಗೆ ಅನೋನ್ಯತೆಯಿಂದ ಇರಬೇಕೆಂದರು.
ಗ್ರಾಮದ ಎಲ್ಲರೊಂದಿಗೆ ಸಹಜೀವನ ನಡೆಸಲು ಸಮಾಜದವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಶಿಕ್ಷಣದಿಂದ ಬಡತನ ದೂರವಾಗುವುದೆಂದು ಮಾಜಿ ಡಿ.ಸಿ.ಸಿ. ಬ್ಯಾಂಕ ನಿರ್ದೇಶಕರಾದ ಭೀರಪ್ಪ ಜುಮನಾಳ ಹೇಳಿದರು.
ಸಾರವಾಡ ಗ್ರಾಮ ಪಂಚಾಯತ ಅಧ್ಯಕ್ಷರು ಹಾಗೂ ಶ್ರೀ ಮರಡಿ ಸಿದ್ದೇಶ್ವರ ದೇವಸ್ಥಾನ ಅಧ್ಯಕ್ಷರಾದ ಶಾಂತಪ್ಪ ಮಲ್ಲಪ್ಪ ನಾಟೀಕಾರ ಸ್ವಾಗತಿಸಿದರು. ಸಮಾಜ ಮುಖಂಡರಾದ ಕಾಮಣ್ಣ ಗಂಗನಳ್ಳಿ ನಿರೂಪಿಸಿದರು. ಈ ಸಂದರ್ಭದಲ್ಲಿ ರಮೇಶ ನಾಟೀಕಾರ, ತಳೇವಾಡ ಪಾಟೀಲ (ವಕೀಲರು), ಶಿವಪ್ಪ ನಾಟೀಕಾರ, ಕೆಂಚಪ್ಪ ನಾಟೀಕಾರ, ಮಡ್ಡೆಪ್ಪ ನಾಟೀಕಾರ, ಪರಮಣ್ಣ ನಾಟೀಕಾರ, ರಾವುತಪ್ಪ ನಾಟೀಕಾರ, ಮಾಯಪ್ಪ ನಾಟೀಕಾರ, ಪರಸಪ್ಪ ಹಳ್ಳಿ, ಸುರೇಶ ನಾಟೀಕಾರ, ವಿಠ್ಠಲ ನಾಟೀಕಾರ, ಭೀರಪ್ಪ ಹಿರೇಕುರುಬರ, ಬಿರೇಶ ಪೂಜಾರಿ, ಬನಸಿದ್ದ ಪೂಜಾರಿ, ಭೀರಪ್ಪ ಕಣಿಮನಿ, ಸೈಬಣ್ಣ ನ. ಗಂಗಾಧರ, ಮಾಳಪ್ಪ ಮಾಶ್ಯಾಳ, ಮಾಳಿಂಗರಾಯ ಮಾರಾಯರು, ಮಲ್ಲಪ್ಪ ಪೂಜಾರಿ, ನಾಗಪ್ಪ ಗುಗದಡ್ಡಿ, ರಮೇಶ ಪೂಜರಿ, ಶಂಕರ ಪೂಜಾರಿ, ಭಗವಂತ ಮಾನೆ, ನಾರಾಯಣ ಬುದ್ನಾರ, ಸನ್ನಪ್ಪ ನಾಟೀಕಾರ, ಹಣಮಂತ ಪೂಜಾರಿ, ಸಿದ್ದು ಪೂಜಾರಿ, ಲಕ್ಷ್ಮಣ ಪೂಜಾರಿ, ನಾಗಪ್ಪ ಪೂಜಾರಿ, ಪಾಟ್ಲು ಪೂಜಾರಿ, ಸಾಯಬಣ್ಣ ಗಂಗಾಧರ, ಮಾನಪ್ಪ ಮಾಶ್ಯಾಳ, ನಾಗಪ್ಪ ಅಂಬಣ್ಣ ಪೂಜಾರಿ, ಭೀರೇಶ ಪೂಜಾರಿ, ಸೋಮನಿಂಗ ಪೂಜಾರಿ, ರ್ಯಾವಪ್ಪ ಪೂಜಾರಿ, ನಾಗಪ್ಪ ಪೂಜಾರಿ, ಮಾಜಿ ಗ್ರಾ.ಪಂ. ಸದಸಯರಾದ ಬಸಪ್ಪ ಲಚ್ಚಪ್ಪ ಸೊನ್ನದ,ಅಮೋಗಿ ಗುಗದೊಡ್ಡಿ, ವಿಠ್ಠಲ ಕಣಿಮನಿ, ಕಲ್ಲಪ್ಪ ನಾಟೀಕಾರ, ಲಕ್ಷ್ಮಣ ಪೂಜಾರಿ, ಇನ್ನಿತರರು ಇದ್ದರು.