ಶ್ರೀ ಮಡಿವಾಳ ಮಾಚಿದೇವರ ಜಯಂತಿ ಆಚರಣೆ

ತಾಳಿಕೋಟೆ:ಫೆ.4: ಪಟ್ಟಣದ ಶ್ರೀ ಸಂಗಮೇಶ್ವರ ಪ್ರೌಢಶಾಲೆಯಲ್ಲಿ ಗುರುವಾರರಂದು ವಚನ ಸಾಹಿತ್ಯ ರಕ್ಷಕರಾದ ಶರಣ ಶ್ರೀ ಮಡಿವಾಳ ಮಾಚಿದೇವರ ಜಯಂತಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ರವಿಕುಮಾರ ಬಿ ಪಾಟೀಲ, ಹಾಗೂ ಮುಖ್ಯೋಪಾಧ್ಯಾಯರಾದ ಅಶೋಕ ಕಟ್ಟಿ, ಮಾಚಿ ದೇವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಈ ಸಮಯದಲ್ಲಿ ಶಿಕ್ಷಕ ಬಿ.ಆಯ್.ಹಿರೇಹೊಳಿ, ಎಸ್.ವಿ.ಜಾಮಗೊಂಡಿ, ಎಸ್.ಎಸ್.ಗುಡಗುಂಟಿ, ಎಮ್.ಎಸ್. ರಾಯಗೊಂಡ, ಎಚ್.ಬಿ.ಪಾಟೀಲ, ಎಸ್.ಬಿ.ಬಿರಾದಾರ, ಯು.ಎಚ್.ಗಟನೂರ, ಕಾಶೀನಾಥ ನಾಲತವಾಡ, ಮುತ್ತು ಹಿರೇಮಠ ಹಾಗೂ ಶ್ರೀಮತಿ ಎ.ಸಿ.ಗುಮಶೆಟ್ಟಿ ವಿದ್ಯಾರ್ಥಿಗಳು ಹಾಜರಿದ್ದರು.