ಶ್ರೀ ಮಠದ ಶಿಕ್ಷಣ ಸಂಸ್ಥೆ ಆರಂಭಿಸಲು ಮನವಿ

 ಹಿರಿಯೂರು.ನ.23;  ಹಿರಿಯೂರು ತಾಲೂಕಿನ  ಆದಿವಾಲ ಗ್ರಾಮ ಪಂಚಾಯಿತಿ ನಿಯೋಗವು ಶಾಸಕರಾದ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್ ರವರ ನೇತೃತ್ವದಲ್ಲಿ ತುಮಕೂರು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಪರಮಪೂಜ್ಯ ಶ್ರೀ  ಸಿದ್ದಲಿಂಗಸ್ವಾಮೀಜಿಗಳ ಆಶೀರ್ವಾದ ಪಡೆದು, ಆದಿವಾಲ ಗ್ರಾಮದಲ್ಲಿರುವ ಶ್ರೀ ಮಠದ ಶಿಕ್ಷಣ ಸಂಸ್ಥೆಯಾದ ನೆಹರೂ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಬಹು ದಿನಗಳ ಬೇಡಿಕೆಯಾದ ಸಂಯುಕ್ತ ಪದವಿ ಪೂರ್ವ ಕಾಲೇಜು ಹಾಗೂ ವೃತ್ತಿಪರ ಕೋರ್ಸ್ ತರಗತಿಗಳನ್ನು ಆರಂಭಿಸಲು ಮನವಿ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಘುನಾಯ್ಕ, ಉಪಾಧ್ಯಕ್ಷ ರಂಗನಾಥ ಹಾಗೂ ಸದಸ್ಯರು, ಮುಖಂಡರಾದ ತ್ರಿಯಂಬಕ ಮೂರ್ತಿ ,  ಮಲ್ಲಿಕಾರ್ಜುನ, ಪ್ರಕಾಶ್, ಬಸವರಾಜ್, ವಿಶ್ವನಾಥ್, ಕಿರಣ್, ಮಹಾಲಿಂಗಪ್ಪ, ಚಂದ್ರಶೇಖರ್, ನಿರಂಜನ್ ಹಾಗೂ  ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.