ಹುಬ್ಬಳ್ಳಿ,ಮೇ27: ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠಕ್ಕೆ ದಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಾದೇಶೀಕ ಕಛೇರಿಯಿಂದ ಶ್ರೀಮಠದಲ್ಲಿ ಉಪಯೋಗಿಸಲಿಕ್ಕೆ 50 ಬ್ಯಾರಿಕೇಡ್‍ಗಳನ್ನು ಜನರಲ್ ಮ್ಯಾನೇಜರಾದ ಅನುರಾಗ ಜೋಶಿ, ಡಿ.ಜಿ.ಎಂ. ಮನಿಶಚಂದ್ರ, ಆರ್.ಎಂ. ಮೋಹನ ಪಾಟೀಲ ಇವರುಗಳು ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ಶ್ರೀಮಠಕ್ಕೆ ದೇಣಿಗೆ ಸಲ್ಲಿಸುವ ಭಕ್ತಾದಿಗಳಿಗೆ, ಸಾರ್ವಜನಿಕರಿಗೆ ಮೊಬೈಲ್ ಮುಖಾಂತರ ದೇಣಿಗೆ ಸಲ್ಲಿಸಲಿಕ್ಕೆ “ಇ ಹುಂಡಿ” (ಕಿಖ ಅoಜe) ಕ್ಯೂ ಆರ್ ಕೋಡ್‍ನ್ನು ನೀಡಿದರು. ಇದೇ ಸಂದರ್ಭದಲ್ಲಿ ಅಧಿಕಾರಿಗಳನ್ನು ಶ್ರೀಮಠದಿಂದ ಸನ್ಮಾನಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಗೌರವ ಕಾರ್ಯದರ್ಶಿಗಳಾದ ಸರ್ವಮಂಗಳಾ ಎನ್. ಪಾಠಕ, ಧರ್ಮದರ್ಶಿಗಳಾದ ಬಾಳು ಟಿ. ಮಗಜಿಕೊಂಡಿ, ವಿನಾಯಕ ಘೋಡ್ಕೆ, ಚನ್ನವೀರ ಡಿ. ಮುಂಗುರವಾಡಿ, ಎಸ್.ಬಿ.ಆಯ್. ಶಾಖಾ ವ್ಯವಸ್ಥಾಪಕರಾದ ಕಿರಣ ಮತ್ತು ಶ್ರೀಮಠದ ಮ್ಯಾನೇಜರ್ ಈರಣ್ಣ ಎಸ್. ತುಪ್ಪದ ಇವರುಗಳು ಹಾಜರಿದ್ದರು.