ಶ್ರೀ ಮಂಗಳಾದೇವಿ ದೇವಸ್ಥಾನದ ವರ್ಷಾವಧಿ ಜಾತ್ರ ಮಹೋತ್ಸವ

ಮಂಗಳೂರು, ಮಾ.೨೯-ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ವರ್ಷಾವಧಿ ಜಾತ್ರ ಮಹೋತ್ಸವವು ತಾ: ೩೦.೦೩-೨೦೨೧ ಮಂಗಳವಾರದಿಂದ ರಿಂದ ೦೪.೦೪.೨೦೨೧ ರವಿವಾರದವರೆಗೆ ಜರಗಲಿರುವುದು. 

ತಾ: ೨೯.೦೩.೨೦೨೧ ಸೋಮವಾರ ಸಾಯಂಕಾಲ ಒಳಗಾಗಿ ಧ್ವಜ ಸ್ತಂಭಕ್ಕೆ ಅಡಿಕೆ ಕೊನೆ ಸಿಯಾಳ ಗೊನೆ ಬಾಳೆ ಹಣ್ಣಿನ ಗೊನೆ ತಂದು  ಕೊಡಬೇಕಾಗಿ ವಿನಂತಿ.

ತಾ: ೩೧.೦೩.೨೦೨೧ ನೇ ಬುಧವಾರ ೧೦೮ ತೆಂಗಿನಕಾಯಿ ಗಣಹೋಮ ಜರಗಲಿರುವುದು.

ತಾ: ೦೩.೦೪.೨೦೨೧ ನೇ ಶನಿವಾರ ಶ್ರೀದೇವಿಯ ಶಯನಕ್ಕೆ ಹೂಗಳನ್ನು ತಂದು ಕೊಡುವವರು ಅದೇ ದಿನ ಸಾಯಂಕಾಲದ ಒಳಗೆ ಕೊಡಬೇಕಾಗಿ ವಿನಂತಿ.

ತಾ: ೦೪.೦೪.೨೦೨ ನೇ ರವಿವಾರ ಬೆಳಿಗ್ಗೆ ೯.೩೦ ಕ್ಕೆ ಹರಕೆ ತುಲಾಭಾರ ನಡೆಯಲಿರುವುದು.

ತಾ: ೦೨.೦೪.೨೦೨೧ನೇ ಶುಕ್ರವಾರ ಬೆಳಗ್ಗೆ ಸೀರೆ ಏಲಂ ಮಾಡಲಾಗುವುದು.

ತಾ: ೦೩.೦೪.೨೦೨೧ ನೇ ಶನಿವಾರ ಮಧ್ಯಾಹ್ನ ಗಂಟೆ ೧೨. ೦೦ಕ್ಕೆ ಪೂಜೆಯಾಗಿ ರಥಾರೋಹಣ ನಂತರ ಸಾಯಂಕಾಲ ಗಂಟೆ ೭.೦೦ ಕ್ಕೆ ರಥೋತ್ಸವ. ಬಲಿ. ಬಟ್ಟಲು ಕಾಣಿಕೆ ಮಹಾಪೂಜೆ, ಶ್ರೀ ಭೂತಬಲಿ, ಕವಾಟ ಬಂಧನ ಶಯನ.

ತಾ: ೦೪.೦೪.೨೦೨೧ನೇ ರವಿವಾರ ಬೆಳಿಗ್ಗೆ ಸೂರ್ಯೋದಯಕ್ಕೆ (ಗಂಟೆ ೦೬:೩೪ ಕ್ಕೆ) ಕವಾಟೊದ್ಯಾಟನೆ ನಡೆಯಲಿರುವುದು,

ತಾ: ಸಾಯಂಕಾಲ ೭.೦೦ ಕ್ಕೆ ಬಲಿ ಹೊರಟು ಅವಭೃತ ಸ್ನಾನ, ಧ್ವಜಾವರೋಹಣ.

ತಾ: ೦೫.೦೪.೨೦೨೧ ನೇ ಸೋಮವಾರ ಸಂಪ್ರೋಕ್ಷಣೆ, ರಾತ್ರಿ ಗಂಟೆ ೮.೩೦ ಕ್ಕೆ ಶ್ರೀ ಕ್ಷೇತ್ರದ ಪರಿವಾರ ದೈವಗಳಿಗೆ ನೇಮೋತ್ಸವ ಜರಗಲಿರುವುದು,

ತಾ: ೦೬.೦೪.೨೦೨೧ ನೇ ಮಂಗಳವಾರ ರಾತ್ರಿ ಗಂಟೆ ೮.೩೫ ಕ್ಕೆ ಹರಕೆಯ ನೇಮೋತ್ಸವ ಜರಗಲಿರುವುದು.

ಶ್ರೀ ಕ್ಷೇತ್ರದಲ್ಲಿ ಪ್ರತಿ ತಂಗಳು ಸಪ್ತಪದಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿರುವುದು. ಆಸಕ್ತರು ಒಂದು ತಿಂಗಳ ಮುಂಚಿತವಾಗಿ ದಾಖಲೆಗಳನ್ನು ದೇವಸ್ಥಾನದ ಕಚೇರಿಯಲ್ಲಿ ನಿಗದಿಪಡಿಸಿ ಸಲ್ಲಿಸಬಹುದು. ಇಲಾಖೆ ಷರತ್ತುಗಳು ಅನ್ವಯವಾಗಲಿದೆ.

ಎಂದು ದೇವಸ್ಥಾನದ ಆಡಳಿತ ಮೊಕ್ತೇಸರರಾದ ಪಿ ರಮನಾಥ ಹೆಗ್ಡೆ ಪ್ರತಿಕಾ ಪ್ರಕಟಣೆಗೆ ತಿಳಿಸಿರುತ್ತಾರೆ.