ಶ್ರೀ ಬೀರಲಿಂಗೇಶ್ವರ ಜಾತ್ರಾಮಹೋತ್ಸವ


ನವಲಗುಂದ,ಮೇ.18: ಸಮೀಪದ ಶಲವಡಿ ಗ್ರಾಮದಲ್ಲಿ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಜಾತ್ರಾಮಹೋತ್ಸವ, ಸಾಮೂಹಿಕ ವಿವಾಹ ಹಾಗೂ ದೇವಸ್ಥಾನದ ಪ್ರಥಮ ವರ್ಷದ ಶ್ರೀ ಬೀರಲಿಂಗೇಶ್ವರ ಪುರಾಣ ಪ್ರಾರಂಭೋತ್ಸವವು ಅದ್ದೂರಿಯಾಗಿ ಜರುಗಿತು.
ಶಲವಡಿಯ ವಿರಕ್ತಮಠದ ಗುರುಶಾಂತೆಶ್ವರ ಮಹಾಸ್ವಾಮೀಜಿ ಸಾನಿಧ್ಯ ವಹಿಸಿದ್ದರು, ಹಿರೇಕುಂಬಿಯ ಅಮ್ಮಯ್ಯನವರು ಅಮೋಘೀಮಠದ ಗುರುಸ್ವಾಮಿಗಳು ಸಾನಿಧ್ಯವಹಿಸಿದ್ದರು. ಪುರಾಣ ಪ್ರವಚಕರಾದ ವೀರಯ್ಯಶಾಸ್ತ್ರೀಗಳು ಚ. ಚರಂತಿಮಠ, ನಿತ್ಯ ಅಭಿಷೇಕದ ನೇತೃತ್ವವನ್ನು ಶ್ರೀಶೈಲಯ್ಯ ಹಿರೇಮಠ, ಸಂಗೀತ ಮುತ್ತುರಾಜ ಹೆಬಸೂರ, ಈಶ್ವರಪ್ಪ ಸಿದ್ದಾಪೂರ ಹಾಗೂ ತಬಲಾ ವಾದಕ ಅಕ್ಷರಸಾಹೇಬ ನದಾಫ ವಹಿಸಿದರು.
ಪ್ರತೀ ವರ್ಷದಂತೆ ಈ ವರ್ಷವೂ ಸರ್ವಧರ್ಮ ಸಾಮೂಹಿಕ ವಿವಾಹಗಳು ನಂತರ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಜರುಗಿತು, ವಿನೋದ ಅಸೂಟಿ ಹಾಗೂ ನವಲಗುಂದ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಗುರುಪ್ರಸಾದ ಪಾಟೀಲ್ ಭಾಗವಹಿಸಿ ದರ್ಶನಾಶಿರ್ವಾದ ಪಡೆದುಕೊಂಡರು. ಜಾತ್ರಾಮಹೋತ್ಸವದ ಅಂಗವಾಗಿ 9 ದಿನ ಪುರಾಣ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಮಾಂತಪ್ಪ ಕುರಹಟ್ಟಿ, ದೇವಪ್ಪ ಕಳ್ಳಿಮನಿ, ಡಿ ಎಫ್ ರೋಣದ, ವಿ.ಸಿ ಪಾಟೀಲ್ ಶ್ರಿನಿವಾಸ ಮರಡ್ಡಿ, ಮುತ್ತಪ್ಪ ಚಿಮ್ಮನಕಟ್ಟಿ, ಚಂದ್ರಶೇಖರ್ ಕಂಬಳಿ ಸೇರಿದಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಫಾಧ್ಯಕ್ಷ, ಸರ್ವಸದಸ್ಯರು ಗ್ರಾಮದ ಗುರು ಹಿರಿಯರು ಪಾಲ್ಗೊಂಡಿದ್ದರು