ಶ್ರೀ ಬಾಲ ಹನುಮನ ತೊಟ್ಟಿಲ ಕಾರ್ಯಕ್ರಮ

ಕೊಪ್ಪಳ, ಏ.27: ಹನುಮ ಜಯಂತಿಯ ಪ್ರಯುಕ್ತ ನಗರದಲ್ಲಿ ಇಂದು ಆಟಗಾರ ಪೇಟೆಯ ಆಂಜನೇಯ ದೇವಸ್ಥಾನದಲ್ಲಿ ಶ್ರೀ ಬಾಲ ಹನುಮನ ತೊಟ್ಟಿಲು ಪೂಜೆ ನೆರವೇರಿಸಲಾಯಿತು. ಎಲ್ಲರು ಭಕ್ತಿ ಹರುಷ ತುಂಬಿ ಬಹಳ ವಿಜೃಂಭಣೆಯಿಂದ ಪೂಜೆಯನ್ನು ಆಚರಿಸಿದರು. ಹನುಮಂತನ ಭಕ್ತರಾದ ಜ್ಯೋತಿ ಬಸವ ಶಿವಕುಮಾರ್ ಪೂಜೆ ನೆರವೇರಿಸಿದರು ಈ ಸಂದರ್ಭದಲ್ಲಿ ನೂತನ ನಗರಸಭೆ ಅಧ್ಯಕ್ಷರಾಗಿ ಪದಗ್ರಹಣ ಮಾಡುತ್ತಿರುವ ಶ್ರೀಮತಿ ಲತಾ ಗವಿಸಿದ್ದಪ್ಪಚಿನ್ನೂರು ರವರಿಗೆ ಶ್ರೀ ಶ್ರೀಹನುಮಂತನ ದೇವಸ್ಥಾನದ ಆಡಳಿತಾಧಿಕಾರಿಗಳಾದ ಸುಕುಮಾರ್ ಸನ್ಮಾನಿಸಿದರು ಕಾರ್ಯಕ್ರಮದಲ್ಲಿ ಹಿಂದೂ ಪರಿಷತ್ ಪದಾಧಿಕಾರಿಗಳಾದ ಜ್ಯೋತಿ ಬಸ ಪ್ರಾಣೇಶ್ ಬಸವರಾಜ್ ಮಲ್ಲಣ್ಣನವರ ವೇಣುಗೋಪಾಲ್ ಮೈಲಾರ ಬಟ್ಟಿ ಮತ್ತು ಶ್ರೀಹನುಮನ ದೇವಸ್ಥಾನದ ಬಳಗದವರು ಮತ್ತು ಊರಿನ ಹಿರಿಯರು ಉಪಸ್ಥಿತರಿದ್ದರು