ಶ್ರೀ ಬಸವೇಶ್ವರರ ಜಯಂತಿ ಆಚರಣೆ

ಬಾದಾಮಿ, ಮೇ12: ತಾಲೂಕಾಡಳಿತದ ವತಿಯಿಂದ ತಹಶೀಲದಾರ ಕಚೇರಿಯ ಸಭಾಭವನದಲ್ಲಿ ಬಸವೇಶ್ವರರ ಹಾಗೂ ಹೇಮರಡ್ಡಿ ಮಲ್ಲಮ್ಮ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ತಹಶೀಲದಾರ ಜೆ.ಬಿ.ಮಜ್ಜಗಿ, ಉಪತಹಶೀಲದಾರ ಎಸ್.ಬಿ.ಬೊಮ್ಮನ್ನವರ, ಸಮಾಜದ ಮುಖಂಡರಾದ ಆರ್.ಬಿ.ಸಂಕದಾಳ, ಕೆ.ವಿ.ಮ್ಯಾಗೇರಿ, ಸಂಜಯ ಬರಗುಂಡಿ, ಡಿ.ಎಂ.ಪೈಲ್, ಎಸ್.ಎ.ಭರಮಗೌಡರ, ಸುಭಾಸ ಅವರಾಧಿ, ಲಿಂಗರಾಜ ಚಿನಿವಾಲರ, ರಾಚಣ್ಣ ಪಟ್ಟಣದ, ಎಸ್.ಕೆ.ಜವಳಗದ್ದಿ, ಚಂದ್ರು ಸೂಡಿ, ಸೇರಿದಂತೆ ಸಮಾಜದ ಮುಖಂಡರು ಹಾಜರಿದ್ದರು.