
ಶಹಾಪುರ:ಜ.9:ಮಕರ ಸಂಕ್ರಾಂತಿ ಅಂಗವಾಗಿ ನಡೆಯುವ ಸಗರ ನಾಡಿನ ಆರಾದ್ಯ ದೇವರುಗಳಾದ ಶ್ರೀ ಬಲಭೀಮೇಶ್ವರ ಜಾತ್ರಮೋಹತ್ಸವದ ಅಂಗವಾಗಿ ಶಹಾಪುರ ಗ್ರಹ ರಕ್ಷಕರು ಸ್ವಚ್ಚತೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು, ಶ್ರೀ ದೇವಸ್ಥಾನದ ಅರ್ಚಕರಾದ ಭೀಮಣ್ಣ ಪೂಜಾರಿ ಚಾಲನೆ ನೀಡಿದರು.
ಟ್ರಷ್ಟಿನ ಮುಖಂಡರಾದ ಸಣ್ಣ ನಿಂಗಣ್ಣ ನಾಯ್ಕೊಡಿ, ಗಂಗಣ್ಣ ಪೂಜಾರಿ, ವೆಂಕಟೇಶ ಬೋನೇರ.ಗ್ರಹ ರಕ್ಷಕ ದಳದ ತಾಲುಕಾ ಘಟಕಾಧಿಕಾರಿಗಳಾದ ಮಾರ್ಥಂಡಪ್ಪ ಮುಂಡಾಸ್. ಸಿನಿಯರ್ ಆಫಿಸರ್ ಮಲ್ಲಪ್ಪ ಕೊಂಬಿನ್. ದೇವಿಂದ್ರಪ್ಪ ನಾಶಿ. ದೇವಿಂದ್ರ ಜಾಕ್ರಿ, ಗ್ರಹರಕ್ಷಕರು ಹಾಜರಿದ್ದರು.