ಶ್ರೀ ಬಯಲು ಹನುಮಾನ್ ಉಚ್ಛಯ್ಯ ಮಹೋತ್ಸವ

ಸಿರವಾರ.ಜ.೧೪- ಎಳ್ಳ ಅಮಾವಾಸ್ಯೆ ಹಬ್ಬದ ನಿಮಿತ್ಯ ಪಟ್ಟಣದ ಶ್ರೀ ಬಯಲು ಹನುಮಾನ್ ನೂತನ ಉಚ್ಛ್ರಾಯ ಮಹೋತ್ಸವವು ಬುಧುವಾರ ಸಂಜೆ ಸಾವಿರಾರು ಭಕ್ತರ ಮಧ್ಯೆ ವಿಜೃಂಭಣೆಯಿಂದ ಜರತುಗಿತು. ಬೆಳಗ್ಗೆ ಹನುಮಾನ್ ದೇವಸ್ಥಾನದಲ್ಲಿ ದೇವಸ್ಥಾನದ ಅರ್ಚಕರಾದ ಎಲಗುರದಾಚಾರ್ಯ ರವರು ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತರು ದೀರ್ಘ ದಂಡ ನಮಸ್ಕಾರ ಸೇರಿದಂತೆ ಇನ್ನಿತರ ಪೂಜೆ ಕೈಂಕಾರ್ಯಗಳು, ಹರಕೆಗಳುನ್ನು ತಿರಿಸಿದರು. ದೇವಸ್ಥಾನದ ಪೂಜಾರಿಗಳಾದ ಖಾಜನಗೌಡ್ರ ಕುಟುಂಬದ ಸದಸ್ಯರು ಉಚ್ಛ್ರಾಯ ಮಹೋತ್ಸವದ ನೇತೃತ್ವದಲ್ಲಿ ಉಚ್ಚಯ್ಯ ಮಹೋತ್ಸವ ಸಕಲ ವಾದ್ಯ ವೇಳದೊಂದಿಗೆ ಮುಕ್ತಾಯವಾಗಿತು. .
ಈ ವೇಳೆ ದೇವಸ್ಥಾನದ ಆಡಳಿತ ಮಂಟಳಿ, ಪಟ್ಟಣದ ಸಾವಿರಾರು ಭಕ್ತರು ಉಚ್ಛ್ರಾಯ ಮಹೋತ್ಸವದಲ್ಲಿ ಭಾಗಿಯಾಗಿ ಶ್ರೀ ಬಯಲು ಹನುಮಾನ್ ಸ್ವಾಮಿಯ ಕೃಪೆಗೆ ಪಾತ್ರರಾದರು.
ತಾಲೂಕಿನ ನಾರಬಂಡಾ,. ಹೊಸೂರು, ಗಣದಿನ್ನಿ ಸೇರಿದಂತೆ ಇನನಿತರ ಗ್ರಾಮಗಳಲ್ಲಿ ಆಂಜನೆಯ್ಯ ಉಚ್ಚಯ್ಯ ಮಹೋತ್ಸವ ಜರುಗಿತು. ಇಂದು ಸಂಜೆ ಹಾಲುಗಂಬ ಉತ್ಸವ ಜರುಗುವುದು.