ಶ್ರೀ ಬನ್ನಿ ಮಹಾಂಕಾಳಿ ರಥೋತ್ಸವ


ಸಂಜೆವಾಣಿ ವಾರ್ತೆ
ತೆಕ್ಕಲಕೋಟೆ, ಜ.22: ಪಟ್ಟಣದ ಬಲುಕುಂದಿ ಗ್ರಾಮದ ಶ್ರೀ ಬನ್ನಿಮಹಾಂಕಾಳಿ ರಥೋತ್ಸವ ಅದ್ದೂರಿಯಾಗಿ ಜರುಗಿತು.
ಗ್ರಾಮದ ಶ್ರೀ ಬನ್ಮಿಮಹಾಂಕಾಳಿ ದೇವಸ್ಥಾನವು ಹೂವಿನಿಂದ ಶೃಂಗಾರ ಗೊಂಡಿತು, ಯುವತಿಯರು ಮಹಿಳೆಯರು ದೇವಿಯ ದರ್ಶನಕ್ಕೆ ಸಾಲುಗಟ್ಟಿ ನಿಂತು ಪೂಜಿಸಿ ದರ್ಶನ ಪಡೆದರು,
ಇತ್ತ ಪುರುಷರು ದೇವಸ್ಥಾನದಲ್ಲಿ ರಾತ್ರಿ ಇಡೀ ಭಜನಾ ಮಂಡಳಿಯೊಂದಿಗೆ ಸೇರಿ ಭಜನೆ ಮಾಡುತ್ತಾರೆ.
ಬಲುಕುಂದಿ ಗ್ರಾಮವು ಇಡೀ ಊರಿಗೆ ಊರೇ ಶೃಂಗಾರಗೊಂಡಿದ್ದು. ವಿಶೇಷವಾಗಿ ಡೊಳ್ಳು ವಾದನದೊಂದಿಗೆ ಸಂಜೆ ಶ್ರೀ ಬನ್ನಿಮಹಾಂಕಾಳಿ ದೇವಿಯ ರಥೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು. ನಿತ್ಯ ಸಂಜೆ ದೇವಿಗೆ ಬಗೆಬಗೆಯ ಹೂವಿನ ವಿಶೇಷ ಅಲಂಕಾರ ಇರುತ್ತದೆೆ. ದೇವಸ್ಥಾನದಲ್ಲಿ ನಿತ್ಯ ಅನ್ನಸಂರ್ಪಣೆ ವ್ಯವಸ್ಥೆ ಇರುತ್ತದೆ. ನಿತ್ಯವೂ ದೇವಿಗೆ ಒಂದೊಂದು ಸೀರೆ ಹೆಚ್ಚಿಸಿ ಅಲಂಕಾರ ಮಾಡಲಾಗುತ್ತದೆ.
ಕೋಟ್:
ಗ್ರಾಮದ ಶ್ರೀಬನ್ನಿ ಮಹಾಂಕಾಳಿದೇವಿ ರಥೋತ್ಸವ ನಡೆಯುತ್ತಿದ್ದು ದೂರ ದೂರದಿಂದ  ಭಕ್ತಾದಿಗಳು ಸಾವಿರಾರು ಸಂಖ್ಯೆಯಲ್ಲಿ ಬರುತ್ತಾರೆ. ಈ ಭಾಗದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಎಂದು ಗ್ರಾಮಸ್ಥ ಹನುಮಂತಪ್ಪ ತಿಳಿಸಿದರು.