ಶ್ರೀ ಪುಣ್ಯಾನಂದಪುರಿ ಶ್ರೀಗಳ ಪುಣ್ಯಸ್ಮರಣೆ

ಹೊಸಪೇಟೆ, ಏ.04: ಲಿಂಗೈಕ್ಯ ಶ್ರೀ ಪುಣ್ಯಾನಂದಪುರಿ ಸ್ವಾಮೀಜಿ ಅವರ 14ನೇ ಪುಣ್ಯಸ್ಮರಣೆ ಕಾರ್ಯಕ್ರಮ ನಗರದ ಬಳ್ಳಾರಿ ರಸ್ತೆಯ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ಶನಿವಾರಜರುಗಿತು.
ವಾಲ್ಮೀಕಿ ನಾಯಕ ಸಮಾಜದ ಮುಖಂಡ ಬಂಡೆ ರಂಗಪ್ಪ ಮಾತನಾಡಿ, ಶ್ರೀ ಪುಣ್ಯಾನಂದ ಸ್ವಾಮೀಜಿ ಅವರು ಸಮಾಜದ ಏಳ್ಗೆಗಾಗಿ ಅವಿರತ ಶ್ರಮಿಸಿದರು. ರಾಜನಹಳ್ಳಿಯಲ್ಲಿ ವಾಲ್ಮೀಕಿ ಮಠವನ್ನು ಸಮಾಜದ ಶ್ರೇಯೋಭಿವೃದ್ಧಿಗಾಗಿ ಕಟ್ಟಿದರು. ವಾಲ್ಮೀಕಿ ನಾಯಕ ಸಮಾಜದಲ್ಲಿ ಒಗ್ಗಟನ್ನು ಮೂಡಿಸಿ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಮುಂದುವರೆಯಲು ಶ್ರಮಿಸಿದರು. ಶ್ರೀಗಳು ಹಾಕಿಕೊಟ್ಟ ಮಾರ್ಗದಲ್ಲಿ ಸಮಾಜ ಮುನ್ನಡೆಯಬೇಕು. ಬಡವರ ಏಳ್ಗೆಗೆ ಎಲ್ಲರೂ ಮುಂದಾಗಬೇಕು. ಜತೆಗೆ ಶ್ರೀಗಳ ತತ್ತ್ವಾದರ್ಶಗಳನ್ನು ಎಲ್ಲರೂ ಪಾಲಿಸೋಣ ಎಂದು ಹೇಳಿದರು.
ಸಮಾಜದ ಮುಖಂಡರಾದ ಗುಡಗಂಟಿ ಮಲ್ಲಿಕಾರ್ಜುನ, ಮುಖಂಡರಾದ ಗೋಸಲ ಬಸವರಾಜ, ಕಟಿಗಿ ವಿಜಯಕುಮಾರ, ಗುಜ್ಜಲ ಗಂಗಾಧರ, ಕಿಚಿಡಿ ಸುನೀಲ್, ಜೆ.ಡಿ. ಮಂಜುನಾಥ, ಪ್ರಕಾಶ ಗುಡಿ, ಎನ್. ವೆಂಕಟೇಶ್, ಟಿ. ಪ್ರಕಾಶ್, ಟಿ. ಮಹೇಶ, ವೆಂಕೋಬ ನಾಯಕ ಪೂಜಾರ್, ಈರಣ್ಣ, ಹನುಮೇಶ್, ಕೃಷ್ಣ, ಮಂಜುನಾಥ ಮತ್ತಿತರರಿದ್ದರು.