ಶ್ರೀ ಪಾಚಲಗಿ ದೇವಿ 33ನೇ ಜಾತ್ರಾ ಮಹೋತ್ಸವ:ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು : ಡಾ. ಅಪ್ಪಾರಾವ್ ದೇವಿ ಮುತ್ಯಾ

ಕಲಬುರಗಿ:ಜ.25: ಮಕ್ಕಳಿಗೆ ವಿದ್ಯಾಭ್ಯಾಸ ಬಹಳ ಮುಖ್ಯವಾಗಿದೆ ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆಂದು ಶ್ರೀನಿವಾಸ ಸರಡಗಿಯ ಪೂಜ್ಯ ಡಾ. ಅಪ್ಪಾರಾವ್ ದೇವಿ ಮುತ್ಯಾ ಅವರು ಕಿವಿಮಾತು ಹೇಳಿದರು.

ನಂದೂರ ಗ್ರಾಮದ ಹೊಡ್ಡ ತಾಂಡಾದಲ್ಲಿ ಶ್ರೀ ಪಾಚಲಗಿ ದೇವಿ 33ನೇ ಜಾತ್ರಾ ಮಹೋತ್ಸವ ಪೂಜೆ ಸಲ್ಲಿಸಿ ಅವರು ಮಾತನಾಡಿ, ಸಮಾಜದಲ್ಲಿ ಒಗ್ಗಟ್ಟು ಬಹಳ ಮುಖ್ಯವಾಗಿದೆ. ಎಲ್ಲರೂ ಒಂದಾಗಿ ನಡೆದರೆ, ಉತ್ತಮ ಸಮಾಜ ಕಟ್ಟಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಗೋಬ್ಬುರವಾಡಿ ಸದ್ಗುರು ಸೇವಾಲಾಲ ಬಂಜಾರ ಶಕ್ತಿ ಪೀಠದ ಪೂಜ್ಯ ಬಳಿರಾಮ ಮಹಾರಾಜ ಆಶೀರ್ವಚನವನ್ನು ನೀಡಿದರು. ಈ ಸಂದರ್ಭದಲ್ಲಿ ಮುಗಳನಾಗಾಂವ ಪ್ರಮ ಪೂಜ್ಯ ಜೇಮಸಿಂಗ ಮಹಾರಾಜರು, ಮಾಜಿ ಸಚಿವ ರೇವುನಾಯಕ ಬೆಳಮಗಿ, ಮಾಜಿ ಮಹಾನಗರ ಪಾಲಿಕೆ ಸದಸ್ಯ ವಿಠ್ಠಲ ಜಾಧವ, ರಾಮಚಂದ್ರ ಜಾಧವ, ಸೇವಾಲಾಲ ಜಯಂತಿ ಜಿಲ್ಲಾಧ್ಯಕ್ಷ ಶಾಮರಾವ ಪವಾರ, ಮಾಜಿ ಗ್ರಾಮ ಪಂಚಾಯತ ಸದಸ್ಯರ ಹಾಗೂ ದೇವಸ್ಥಾನ ಸಮಿತಿ ಅಧ್ಯಕ್ಷ ಹಾಗೂ ಆಲ ಇಂಡಿಯಾ ಬಂಜಾರಾ ಸೇವಾ ಸಂಘ ಕಾರ್ಯ ಅಧ್ಯಕ್ಷ ಶ್ರೀಮಂತ ಡಿ ಪವಾರ, ದೇವಸ್ಥಾನ ಕಮಿಟಿ ಉಪಾಧ್ಯಕ್ಷ ಸುರೇಶ್ ಜಿ. ರಾಠೋಡ, ಬಿ.ಬಿ ನಾಯಕ, ವಿಜಯ ಜಾಧವ, ಗ್ರಾಮದ ಮುಖಂಡರಾದ ಈರಣ್ಣಗೌಡ ಪಾಟೀಲ, ವಿನೋದ ಚವ್ಹಾಣ, ಘಣು ನಾಯಕ, ಟೋಪು ಚವ್ಹಾಣ, ಕೋಟು ಕಾನು ಪವಾರ ಹಾಗೂ ಗ್ರಾಮದ ಹಿರಿಯರು , ಯುವಕರು ಹಾಗೂ ಮಹಿಳೆಯರು ಭಾಗಿಯಾಗಿದ್ದರು.
ಡಾ. ಪ್ರೇಮಸಿಂಗ ಚವ್ಹಾಣ ಅವರು ನಿರೂಪಿಸಿದರು.