ಶ್ರೀ ಪತಂಜಲಿ ಯೋಗ ಶಿಕ್ಷಣದಿಂದ ವಸಂತ ಶಿಬಿರ

ಕೋಲಾರ,ಮೇ,೩- ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ತಾಲೂಕಿನ ಧನಮಟ್ನಹಳ್ಳಿ ಗ್ರಾಮದ ಶ್ರೀ ಮೂಲ ಆಂಜನೇಯಸ್ವಾಮಿ ಬೆಟ್ಟದಲ್ಲಿ ಮಕ್ಕಳಿಗೆ ವಸಂತ ಶಿಬಿರವನ್ನು ಏರ್ಪಡಿಸಲಾಯಿತು. ಶ್ರೀ ಮೂಲ ಆಂಜನೇಯಸ್ವಾಮಿಗೆ ಅಭಿಷೇಕ, ವಿಶೇಷ ಪೂಜೆ ನಡೆಸಿ ಬೆಟ್ಟದ ಪರಿಸರದಲ್ಲೇ ಮಕ್ಕಳಿಗೆ ಯೋಗಾಭ್ಯಾಸ ಮಾಡಲಾಯಿತು.
ಶ್ರೀ ಮೂಲ ಆಂಜನೇಯಸ್ವಾಮಿ ದೇವಾಲಯ ಟ್ರಸ್ಟ್‌ನ ಕಾರ್ಯದರ್ಶಿ ಧನಮಟ್ನಹಳ್ಳಿ ಡಾ|| ವೆಂಕಟೇಶಮೂರ್ತಿ ಅವರು ಶ್ರೀ ಮೂಲ ಆಂಜನೇಯ ದೇವಸ್ಥಾನ ಹಾಗೂ ಬೆಟ್ಟದ ಇತಿಹಾಸ ಪರಿಚಯ ಹಾಗೂ ಬೆಟ್ಟದಲ್ಲಿ ದೊರೆಯುವ ಗಿಡಮೂಲಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ವಿ. ವೇಣುಗೋಪಾಲ್ ಮಾರ್ಗದರ್ಶನದಲ್ಲಿ ಮಕ್ಕಳು ಮುಂಜಾನೆ ಚಾರಣ ನಡೆಸಿ ಬೆಟ್ಟದ ಮೇಲೆ ಯೋಗ, ಸೂರ್ಯ ನಮಸ್ಕಾರ, ಪ್ರಾಣಾಯಾಮ, ಧ್ಯಾನ, ಭಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಸಮಿತಿ ಸಂಚಾಲಕರಾದ ಶ್ರೀನಿವಾಸ್, ರಮೇಶ್, ಮಂಜುಳ, ಶಂಕರ್, ಆಶಾ, ದೀಪಾ ಹಾಗೂ ವಸಂತ ಶಿಬಿರದ ಮಕ್ಕಳು ಉಪಸ್ಥಿತರಿದ್ದರು.