
ಅಥಣಿ :ಫೆ.25: ಮಹಾರಾಷ್ಟ್ರ ರಾಜ್ಯದ ಜತ್ತ ತಾಲೂಕಿನ ಹಳ್ಳಿ ಗ್ರಾಮದ ಶ್ರೀ ಪಂಚಲಿಂಗೇಶ್ವರ ಭೂ ಕೈಲಾಸ ಆಶ್ರಮದ ಕಟ್ಟಡ ಕಾಮಗಾರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಥಣಿ ವತಿಯಿಂದ ಒಂದು ಲಕ್ಷ ರೂಗಳ ಡಿಡಿ ಯನ್ನು ಜಿಲ್ಲಾ ನಿರ್ದೇಶಕರಾದ ಶ್ರೀಮತಿ ನಾಗರತ್ನ ಹೆಗಡೆ ವಿತರಣೆ ಮಾಡಿ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಸಮಗ್ರವಾಗಿ ಮಾಹಿತಿ ನೀಡಿದರು
ಈ ಡಿಡಿ ವಿತರಣಾ ಕಾರ್ಯಕ್ರಮದಲ್ಲಿ ಕಮಿಟಿಯ ಸೆಕ್ರೆಟರಿ ಭೀಮಶಂಕರ ಉಮರಾಣಿ, ಕಮಿಟಿಯ ಸದಸ್ಯರಾದ ಬಾಬು ಅಣ್ಣಪ್ಪ ನಾಗುಂಡ, ಸಿದ್ದರಾಮ ಕವೇಕರ, ರಾಮಚಂದ್ರ ಹವಿನಾಳ, ಮಲ್ಲಿಕಾರ್ಜುನ ಸುರಗೊಂಡ, ಊರಿನ ಮುಖಂಡರಾದ ಲಾಲಸಾಬ ಮುಲ್ಲಾ , ಶ್ರೀಶೈಲ ಲಂಗೋಟಿ, ಕುಮಾರ ಮನಗೂಳಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು