ಶ್ರೀ ಪಂಚಲಿಂಗೇಶ್ವರ ಜಾತ್ರಾ ಮಹೋತ್ಸವ

ಮುನವಳ್ಳಿ, ಮಾ5: ಪಟ್ಟಣದ ಐತಿಹಾಸಿಕ ಪರಂಪರೆಯುಳ್ಳ ಶ್ರೀ ಪಂಚಲಿಂಗೇಶ್ವರ ಜಾತ್ರಾ ಮಹೋತ್ಸವ ಮಾ. 6 ರಿಂದ ಮಾ.14 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗುವದು.
ದಿ. 6 ರಿಂದ ದಿ. 9 ರವರೆಗೆ ಸಂಜೆ 5 ಗಂಟೆಗೆ ಹುಚ್ಛಾಯ (ಸಣ್ಣತೇರು) ರಥೋತ್ಸವ ಜರಗುವದು.
ದಿ. 8 ರಂದು ಮಹಾಶಿವರಾತ್ರಿ ಶ್ರೀ ಪಂಚಲಿಂಗೇಶ್ವರನಿಗೆ ಮಹಾರುದ್ರಾಭಿಷೇಕ ಹಾಗೂ ಬೆಳಿಗ್ಗೆ ಸಾಬುದಾನಿ ಮಹಾಪ್ರಸಾದ, ಮದ್ಯಾಹ್ನ 2 ಗಂಟೆಗೆ ಶ್ರೀ ಚಂದ್ರಶೇಖರ ಮಠದಿಂದ ಕಳಸ ತರುವುದು ಹಾಗೂ ರಾತ್ರಿ 9 ಗಂಟೆಯಿಂದ ಜಾಗರಣೆ.
ದಿ. 10 ರಂದು ಶಿವರಾತ್ರಿ ಅಮವಾಸ್ಯೆ ದಿವಸ ಬೆಳಿಗ್ಗೆ 5 ಗಂಟೆಗೆ ಮಹಾರುದ್ರಾಭಿಷೇಕ, ಮೂರ್ತಿ ಅಲಂಕಾರ ನಂತರ ದೇವಸ್ಥಾನದಲ್ಲಿ ಮಹಾಪ್ರಸಾದ, ನಂತರ ಮಧ್ಯಾಹ್ನ 2 ಗಂಟೆಗೆ ಬಣಗಾರ ಓಣಿಯಿಂದ ಶೀ ವ್ಯಾಸ ಮಹರ್ಷಿಗಳ ತೋಳು ಪೂಜೆಗೊಂಡು ಸಕಲ ವಾದ್ಯಗಳೊಂದಿಗೆ ಹಾಗೂ ಪುರವಂತರ ವೀರಾವೇಶದ ಒಡಪುಗಳಿಂದ ಊರಿನ ಪ್ರಮುಖ ಬೀದಿಗಳಲ್ಲಿ ಹಾಯ್ದು ಸಂಜೆ 5 ಗಂಟೆಗೆ ದೇವಸ್ಥಾನ ತಲುಪುವುದು. ಸಂಜೆ 5.30 ಕ್ಕೆ ಶ್ರೀ ಸೋಮಶೇಖರಮಠದ ಶ್ರೀ ಮುರುಘೇಂದ್ರ ಶ್ರೀಗಳ ಸಾನಿಧ್ಯದಲ್ಲಿ ಮಹಾ ರಥೋತ್ಸವ ಜರಗುವದು.
ದಿ.11 ರಂದು ಬೆಳಗ್ಗೆ 10 ಗಂಟೆಗೆ ಪಂಚಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಟ್ರ್ಯಾಕ್ಟರ್ ಇಂಜಿನ್ ಜಗ್ಗುವ ಸ್ಪರ್ಧೆ ಪ್ರಥಮ 20000, ದ್ವಿತೀಯ 15000, ತೃತೀಯ 10000, ನಾಲ್ಕನೆ 5000 ವಿಜತರಿಗೆ ನಗದು ಬಹುಮಾನ ವಿತರಿಸುವರು. ನಂತರ ಸಂಜೆ ಸ್ಥಳಿಯ ಶಾಲಾ ಮಕ್ಕಳಿಂದ ಸಮೂಹ ನೃತ್ಯ ಪ್ರದರ್ಶನ ಜರಗುವದು.
ದಿ.12 ರಂದು ಬೆಳಗ್ಗೆ 10 ಗಂಟೆಗೆ ತರೆ ಬಂಡಿ ಸ್ಪರ್ಧೆ ದೇವಸ್ಥಾನದ ಆವರಣದಲ್ಲಿ ಪ್ರಥಮ 30000, ದ್ವಿತೀಯ 25000, ತೃತೀಯ 20000, ನಾಲ್ಕನೆ 15000, ಐದನೆ 10000 ರೂ ವಿಜತರಿಗೆ ನಗದು ಬಹುಮಾಣ ವಿತರಿಸುವರು. ನಂತರ ಸಂಜೆ 6 ಗಂಟೆಗೆ ಡಾನ್ಸ್ ಸಂಉಓಜಕರ ತಂಡದಿಂದ ಡಾನ್ಸ್ ಧಮಾಕಾ ಜರಗುವದು.
ದಿ.13 ರಂದು ಸ್ಥಳಿಯ ಮಹಿಳೆಯರಿಗಾಗಿ ಬೆಳಗ್ಗೆ 10 ಗಂಟೆಗೆ ವಿವಿಧ ಸ್ಪರ್ಧೆಗಳು ಮಣ್ಣಿನಲ್ಲಿ ಶಿವಲಿಂಗ ಮಾಡುವುದು, ರೀಲೆ ಮತ್ತು ಚೆಂಡು ಹಾಕುವುದು, ಮ್ಯೂಜಿಕಲ್ ಚೇರ್ ಸೇರಿದಂತೆ ಇನ್ನಿತರ ಆಟಗಳು ಜರಗುವವು. 11 ಗಂಟೆಗೆ ಒಂದು ನಿಮಿಷದ ಟ್ರ್ಯಾಕ್ಟರ್ ಜಿಗ್-ಜಾಗ ಸ್ಪರ್ಧೆ ವಿಜೆತರಿಗೆ ನಗದು ಬಹುಮಾನ ವಿತರಿಸುವರು. ಸಂಜೆ 6 ಗಂಟೆಗೆ ಹೆಜ್ಜೆ ಗೆಜ್ಜೆ ಜಾನಪದ ಕಲಾ ತಂಡ ಮತ್ತು ದೊಡ್ಡಾಟ ಕುಣಿತ ಜಾನಪದ ಜಾತ್ರೆ ಜರಗುವದು ಹಾಗೂ ಸ್ಥಳೀಯ ಮಹಿಳೆಯರಿಂದ ಅನುಭವ ಮಂಟಪದ ಶರಣರ ಒಂದು ಅನುಭಾವದ ಸಂಭಾಷಣೆ ಜರಗುವದು.
ದಿ.14 ರಂದು ಜವಾರಿ ಆಕಳು, ಡೈರಿ ಆಕಳು, ಹೋರಿಗಳು, ಎತ್ತುಗಳು ಹಿಗೆ ಜಾನುವಾರು ಜಾತ್ರೆ ಮತ್ತು ಸ್ಪರ್ಧೆ ಬೆಳಗ್ಗೆ 9 ಗಂಟೆಗೆ ಜರಗುವದು.
ದಿ.11 ರಿಂದ ದಿ.14 ರ ವರೆಗೆ ಪ್ರತಿ ದಿನ ಸಂಜೆ 4-30 ಕ್ಕೆ ಕುಸ್ತಿ ಮೈದಾನದಲ್ಲಿ ಕುಸ್ತಿ ಪಟುಗಳಿಂದ ಕುಸ್ತಿ ಪಂದ್ಯಗಳು ಜರಗುವವು. ಎಂದು ಶ್ರೀ ಪಂಚಲಿಂಗೇಶ್ವರ ಜಾತ್ರಾ ಕಮೀಟಿಯ ಅಧ್ಯಕ್ಷ ಅಂಬ್ರಿಷ ಯಲಿಗಾರ ಪ್ರಕಟಣೆಯಲ್ಲಿ ತಿಳಿಸಿರುವರು.