ಶ್ರೀ ನೀಲಕಂಠ ಕಾಳೇಶ್ವರ ರಥೋತ್ಸವಕ್ಕೆ ಸಿಲ್ ಡೌನ್

ಕಾಳಗಿ. ಮೇ.3: ದೇಶಾದ್ಯಂತ ಪ್ರತಿನಿತ್ಯ ಕೊರೋನಾ ಮಹಾಮಾರಿ ಮಿತಿಮೀರಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಶ್ರೀ ನೀಲಕಂಠ ಕಾಳೇಶ್ವರ ರಥೋತ್ಸವ ರದ್ದುಪಡಿಸಲಾಗಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ರಥವನ್ನು ಮತ್ತು ದೇವಾಲಯವನ್ನು ತಹಶೀಲ್ದಾರ ನಾಗರಾಜ ತರಗೆ, ಪೊಲೀಸ್ ಬಂದೋಬಸ್ತ್ ನೇತೃತ್ವದಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿದ್ದು.
ಜಾತ್ರೆ ರದ್ದುಪಡಿಸಿದ್ದಲ್ಲದೆ ರಥವನ್ನೆ ಆಚೀಚೆ ಚಲಿಸದಂತೆ ಸಂಪೂರ್ಣವಾಗಿ ಲಾಕಾಡೌನ್ ಮಾಡಿದ್ದಾರೆ.
ನೀಲಕಂಠ ಕಾಳೇಶ್ವರ ರಥಕ್ಕೆ ಬ್ಯಾರಿಕೆಡ್ ಹಚ್ಚಿ ರಥ ಒಂದಿಂಚು ಚಲಿಸದಂತೆ ಸಿಲ್ ಡೌನ್ ಮಾಡಿಲಾಗಿದೆಯಲ್ಲದೆ. ಈ ರಥದ ಪಕ್ಕದಲ್ಲೇ ಕಳೆದ 2 ದಿನದಿಂದ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.
ರಥಕ್ಕೆ ಹಗ್ಗದಿಂದ ಬಿಗಿದು, ಬ್ಯಾರಿಕೆಡ್ ಹಾಕಿ ರಥ ಚಲೀಸದಂತೆ ಸಿಲ್ ಡೌನ್ ಮಾಡಲಾಗಿದೆ.
ಕಾಳಗಿ ನೀಲಕಂಠ ಕಾಳೇಶ್ವರ ಜಾತ್ರೆ ಜಿಲ್ಲೆಯಲ್ಲೇ ಹೆಸರುವಾಸಿಯಾಗಿತ್ತು.
ಸಾವಿರಾರು ಜನ ಸೇರುವ ಜಾತ್ರೆ ಇದಾಗಿರೋದರಿಂದ ಮುಂಜಾಗ್ರತೆಯಾಗಿ ತಸಿಲ್ದಾರ್, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ನೇತೃತ್ವದಲ್ಲಿ ರಥ ಹಾಗೂ ದೇವಸ್ಥಾನವನ್ನೇ ಸಿಲ್ ಡೌನ್ ಮಾಡಲಾಗಿದೆ.