ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಆಚರಣೆ

ಕಲಬುರಗಿ:ಜ.22: ಶಹಾಬಜಾರ ನಾಕಾ ವೃತ್ತದಲ್ಲಿ ಕರ್ನಾಟಕ ರಾಜ್ಯ ಕೋಲಿ ಕಬ್ಬಲಿಗ ಎಸ್.ಟಿ.ಹೋರಾಟ ಸಮಿತಿಯಿಂದ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ನವರ 903ನೇ ಜಯಂತೊತ್ಸವವನ್ನು ವಿಜೃಂಬಣೆಯಿಂದ ಸಿಹಿ ಹಂಚಿ ಆಚರಿಸಲಾಯಿತು.

ಸಮಾಜದ ಮುಖಂಡ ತಿಪ್ಪಣಪ್ಪ ಕಮಕನೂರ ಹಾಗೂ ಲಚ್ಚಪ್ಪ ಎಸ್. ಜಮಾದಾರ ಅವರು ಶ್ರೀ ನಿಜಶರಣ ಅಂಬಿಗರ ಚೌಡಯ್ಯ ನವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಜಯಂತೊತ್ಸವಕ್ಕೆ ಮೇರೆಗು ತಂದರು.

ಈ ಸಂಧರ್ಭದಲ್ಲಿ ಸಮಾಜದ ಮುಖಂಡರಾದ ಲಚ್ಚಪ್ಪ ಎಸ್. ಜಮಾದಾರ ಅವರು ಮಾತನಾಡಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ನವರ ಪುತಳಿಯನ್ನು ಮಹಾನಗರ ಪಾಲಿಕೆಯವರು ಹಾಗೂ ಜಿಲ್ಲಾಡಳಿತ ಆದಷ್ಟು ಬೇಗನೆ ನಿರ್ಮಿಸಬೇಕೆಂದು ಈ ಮೂಲಕ ಆಗ್ರಹಿಸಿದರು.

ತಿಪ್ಪಣಪ್ಪ ಕಮಕನೂರ ರವರು ಮಾತನಾಡಿ ಸರ್ಕಾರ ಈ ಕೂಡಲೆ ಬಹುಸಂಖ್ಯಾತ ಹೊಂದಿರುವ ಕೋಲಿ ಕಬ್ಬಲಿಗ ಸಮಾಜದ ಗುರುಗಳಾದ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ಸ್ಥಾಪಿಸಿ ಸರ್ಕಾರ ಹಾಗೂ ಜಿಲ್ಲಾಡಳಿತ ಸಾಮಾಜಿಕ ನ್ಯಾಯವನ್ನು ವದಗಿಸಿಕೊಡಬೇಕೆಂದು ಒತ್ತಾಯಿಸಿದರು.

ಈ ಜಯಂತೋತ್ಸವದ ಸಂಧರ್ಭದಲ್ಲಿ ಸಮಾಜದ ಮುಖಂಡರಾದ ರಾಜಗೋಪಾಲ ರೆಡ್ಡಿ, ಜಿಲ್ಲಾ ಜಯಂತೊತ್ಸವದ ಅದ್ಯಕ್ಷ ರಮೇಶ ನಾಟೇಕರ, ಜಿಲ್ಲಾ ಕೋಲಿ ಸಮಾಜದ ಮುಖಂಡರಾದ ಬಸವರಾಜ ಬಿದನೂರ, ಶಿವು ದಣಿ, ಸಿದ್ದು ಬಿದನೂರ, ಜಯಶ್ರೀ ಎಂ.ಕಟ್ಟಿಮನಿ, ಮಾರುತಿ ಚೌಡಾಪೂರ, ಮಲ್ಲು ಬಿದನೂರ, ಸುಭಾಷ ಬಿದನೂರ, ಅಂಬರಿಷ ಬಿದನೂರ, ಮಲ್ಲು ವಾಲೀಕರ, ಅವಣ್ಣಗೌಡ ಪಾಟೀಲ, ವೈಜುನಾಥ ಜಮಾದಾರ , ಚಿದಾನಂದ ಹೊನಗುಂಟಿ ಹಾಗೂ ಇತರರು ಉಪಸ್ಥಿತರಿದ್ದರು.