ಶ್ರೀ ನಾಗದೇವತಾ ಮೂರ್ತಿ ಪ್ರತಿಷ್ಠಾಪನೆ

ತಾಳಿಕೋಟೆ:ಆ.2: ಪಟ್ಟಣದ ಎಸ್.ಕೆ. ನಗರ ಬಡಾವಣೆಯ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಶ್ರೀ ನಾಗದೇವತಾ ಮೂರ್ತಿ ಪ್ರತಿಷ್ಠಾಪನಾ ಕಾರ್ಯವು ಭಕ್ತಿಭಾವದೊಂದಿಗೆ ಸೋಮವಾರರಂದು ಜರುಗಿತು.

   ಮೂರ್ತಿ ಪ್ರತಿಷ್ಠಾಪನಾ ಕಾರ್ಯವನ್ನು ವೇ. ಶ್ರೀ ಸಂತೋಷ ಭಟ್ ಗುರೂಜಿ, ಹಾಗೂ ಶ್ರೀ ರವಿ ಗುರೂಜಿ, ಅವರು  ನೆರವೇರಿಸಿದರು.
ಪುರಸಭಾ ಸದಸ್ಯರಾದ ವಾಸುದೇವ ಹೇಬಸೂರ, ಹಿರಿಯರಾದ ರಾಜಶೇಖರ್ ಹಿರೇಮಠ, ಡಿ.ವಿ. ಬಡಿಗೇರ. ಎಚ್.ಎಸ್.ಪಾಟೀಲ, ಎಂ ಎಚ್ ಚೌದ್ರಿ, ಸಿ ಲಿಂಗಪ್ಪ, ರಾಜು ಹಿರೇಮಠ ಒಳಗೊಂಡು ಬಡಾವಣೆಯ ಭಕ್ತಾಧಿಗಳು ಪಾಲ್ಗೊಂಡಿದ್ದರು.

ನಾಗದೇವತೆಗೆ ಹಾಲು ಎರೆದು ಸಂಭ್ರಮ

ಪಟ್ಟಣದ ವಿವಿಧ ನಾಗದೆವತೆಗಳ ಮಹಾ ಮೂರ್ತಿಗಳಿಗೆ ಮಹಿಳೆಯರು ಮೊದಲನೇ ದಿನವಾದ ಸೋಮವಾರರಂದು ಹಾಲನ್ನು ಎರೆದು ಸಂಬ್ರಮಿಸಿ ಭಕ್ತಿಭಾವವನ್ನು ಮೆರೆದರು.

ಪಟ್ಟಣದ ಪುರಾತನ ರಾಜವಾಡೆ, ನಾಗರಕಲ್ಲ ಬಡಾವಣೆ, ಭೀಮನಭಾವಿಯಲ್ಲಿಯ ನಾಗದೇವತೆಗೆ, ನಾಗಪ್ಪನ ಕಟ್ಟಿ ಒಳಗೊಂಡಂತೆ ವಿವಿಧಡೆ ಮಹಿಳೆಯರು ತೆರಳಿ ನಾಗದೇವತಾ ಮೂರ್ತಿಗಳಿಗೆ ಹಾಲನ್ನು ಎರೆದು ನೈವೇದ್ಯೆವನ್ನು ಅರ್ಪಿಸಿ ಭಕ್ತಿಭಾವ ಮೆರೆದರು.