ಶ್ರೀ ನಗರೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ

ವಿಜಯಪುರ.ನ೧೧:ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ನಗರೇಶ್ವರಸ್ವಾಮಿ ದೇವಾಲಯದಲ್ಲಿ ಆಶ್ಲೇಷ ನಕ್ಷತ್ರ ಅಷ್ಟಮಿ ತಿಥಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ಮಂಗಳವಾರದಂದು ಜರುಗಿದವು.
ಆ ಪ್ರಯುಕ್ತ ದೇವರಿಗೆ ಬೆಳಿಗ್ಗೆಯಿಂದಲೇ ರುದ್ರಾಭಿಷೇಕ, ವಿಶೇಷ ಹೂವಿನ ಅಲಂಕಾರ, ಪೂಜೆ ನಡೆಯಿತು.
ಇದೇ ಸಂದರ್ಭದಲ್ಲಿ ದೇವಾಲಯದ ಪ್ರಧಾನಾರ್ಚಕ ಸಿ.ಮಂಜುನಾಥಾರಾಧ್ಯ ಮಾತನಾಡಿ, ಧಾರ್ಮಿಕ, ಪಾರಮಾರ್ಥಿಕ ವಿಚಾರಗಳಲ್ಲಿ ಆಸಕ್ತಿ ಹೊಂದಿದ್ದು, ಹಿಡಿದ ಕೆಲಸಕಾರ್ಯಗಳನ್ನು ಕೈಬಿಡದೇ ಸಂಪೂರ್ಣಮಾಡಬಲ್ಲ ಚಾತುರ್ಯತೆ, ಜಾಣ್ಮೆ, ಸಮಯಾವಧಾನ, ಸಾತ್ವಿಕತೆ, ನಾಯಕತ್ವದ ಮಹತ್ತರತೆಯನ್ನು ಪಡೆಯಬೇಕು ಎಂದರು. ಶ್ರೀ ನಗರೇಶ್ವರಸ್ವಾಮಿ ದೇವಾಲಯ ಅಭಿವೃದ್ಧಿಸಮಿತಿ, ನಗರ್ತಯುವಕಸಂಘದ ಪದಾಧಿಕಾರಿಗಳು ಇದ್ದರು.