ಶ್ರೀ ಧನ್ವಂತರಿ ಹೋಮ

ರಾಯಚೂರು.ಜೂ.೦೯- ಶ್ರೀ ಶಾರದಾಂಬೆ ಜ್ಯೋತಿಷ್ಯಾಲಯದ ವತಿಯಿಂದ ಕೆ.ನಾರಾಯಣ ಗೂರೂಜೀ ಅವರ ಸಾರಥ್ಯದಲ್ಲಿ ಶ್ರೀ ಧನ್ವಂತರಿ ಹೋಮ ನಿರ್ವಹಿಸಲಾಯಿತು.
ಹೋಮವನ್ನು ಬೊಗ್ಗುಲ ಹನುಮಂತಪ್ಪ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಹೋಮ ಕಾರ್ಯಕ್ರಮಕ್ಕೆ ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಶಂಕ್ರಪ್ಪ ಅವರು ಆಗಮಿಸಿದ್ದರು. ಇಎಸ್‌ಸಿ ಉದ್ಯಮಿಗಳಾದ ವಿಕ್ರಂ ಹಾಗೂ ಶಾರದಾಂಬೆ ಜ್ಯೋತಿಷ್ಯಾಲಯದ ಶಿಷ್ಯವೃಂದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.